ವಿರಾಜಪೇಟೆ ಸೆ.2 NEWS DESK : 2024-25ನೇ ಸಾಲಿನ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವು ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು. ಬಾಲಕರ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಕೊಂಡಂಗೇರಿಯ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆದ ಅಥ್ಲೆಟಿಕ್ಸ್‍ನಲ್ಲಿ ಶಾಲೆಯ ಅಪ್ರತಿಮ ಕ್ರೀಡಾಪಟು ಮೊಹಮ್ಮದ್ ಪಿ.ಹೆಚ್.ಮಿಸ್ಹಾಬ್ 100 ಮೀಟರ್ ಓಟದಲ್ಲಿ ಪ್ರಥಮ, 200 ಮೀಟರ್ ಓಟದಲ್ಲಿ ಪ್ರಥಮ ಹಾಗೂ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಹೆಚ್.ಯು.ಮೊಹಮ್ಮದ್ ಹರ್ಷದ್ 200ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಮುಬಶೀರ್, ಪಿ.ಹೆಚ್.ಮೊಹಮ್ಮದ್ ಮಿಸ್ಹಾಬ್, ಹೆಚ್.ಯು.ಹರ್ಷದ್ ಹಾಗೂ ಪಿ.ಎಂ.ನಾಜಿಮ್ 4*100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ, ಮುಬಶೀರ್, ಪಿ.ಹೆಚ್.ಮೊಹಮ್ಮದ್ ಮಿಸ್ಹಾಬ್, ಹೆಚ್.ಯು.ಹರ್ಷದ್ ಹಾಗೂ ತೌಫೀಕ್ 4*400 ಮೀಟರ್ ರಿಲೇ ಸ್ಫರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ಇವರು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಶಾಲಾ ಎಸ್.ಡಿ.ಎಂ.ಸಿ. ಸಮಿತಿ ಹಾಜರಿದ್ದರು.