ನಾಪೋಕ್ಲು ಸೆ.2 NEWS DESK : ಕಕ್ಕುಂದಕಾಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ವರ್ಷದ ಕೊನೆಯ ಶ್ರಾವಣ ಶನಿವಾರದ ವಿಶೇಷ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶ್ರಾವಣ ಶನಿವಾರ ಪ್ರಯುಕ್ತ ದೇವಾಲಯದಲ್ಲಿ ಮುಂಜಾನೆಯಿಂದಲೇ ಅಭಿಷೇಕ, ಸಂಕಲ್ಪ, ವೆಂಕಟೇಶ್ವರನಿಗೆ ವಿಶೇಷ ಮಹಾಪೂಜೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ನಂತರ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ನೆರವೇರಿತು. ದೇವಾಲಯದ ಮುಖ್ಯ ಅರ್ಚಕ ಸುಧೀರ್ ಪೂಜಾ ಕೈಂಕರ್ಯಗಳು ನೆರವೇರಿಸಿಕೊಟ್ಟರು. ದೇವಾಲಯದಲ್ಲಿ ಶ್ರಾವಣ ಶನಿವಾರ ಪೂಜಾ ಕಾರ್ಯಕ್ರಮಗಳು ಆ.10 ರಿಂದ ಪ್ರಾರಂಭಗೊಂಡು ನಾಲ್ಕು ಶ್ರಾವಣ ಶನಿವಾರ ಆಚರಣೆ ಮಾಡಲಾಯಿತು. ಅನ್ನದಾನದ ಸೇವಾಕರ್ತರಾಗಿ ಕಕ್ಕುಂದಕಾಡು ಸುಮ ಶ್ರೀನಿವಾಸ್ ಮತ್ತು ಮಕ್ಕಳು, ಹೈದರಾಬಾದ್ ದಿವ್ಯ ಲೋಕೇಶ್ ದಂಪತಿಗಳು ಮತ್ತು ಮಕ್ಕಳು, ಶ್ರೀ ಲಕ್ಷ್ಮಿ ವೆಂಕಟೇಶ್ವರ ಭಕ್ತ ವೃಂದ ಹಾಗೂ ನಾಪೋಕ್ಲು ವಿನ ಡಾ.ದೇವದಾಸ್ ಭಕ್ತಾದಿಗಳಿಗೆ ಅನ್ನದಾನವನ್ನು ನಡೆಸಿದರು. ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಉಪಾಧ್ಯಕ್ಷ ಟಿ.ಕೆ.ಸೂರ್ಯ ಕುಮಾರ್, ಕಾರ್ಯದರ್ಶಿ ಸುಜಿ ಕುಮಾರ್, ಖಜಾಂಚಿ ಎಂ.ಪಿ.ಗೋಪಾಲ, ಗೌರವಾಧ್ಯಕ್ಷ ಟಿ.ಎನ್.ರಮೇಶ್, ಗ್ರಾ.ಪಂ ಸದಸ್ಯ ಕುಲ್ಲೇಟಿರ ಅರುಣ್ ಬೇಬಾ, ಹಿರಿಯರಾದ ಟಿ.ವಿ.ಶ್ರೀನಿವಾಸ್, ಟಿ.ಎ.ಆನಂದ ಸ್ವಾಮಿ, ನಿರ್ದೇಶಕರಗಳಾದ ರಾಧಾಕೃಷ್ಣ ರೈ, ಸೀನ, ಶ್ಯಾಮ್ ಮಂದಪ್ಪ, ತಂಗಾ ಇತರ ನಿರ್ದೇಶಕರು ಸೇರಿದಂತೆ ಊರ ಹಾಗೂ ಪರ ಊರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.