ಮಡಿಕೇರಿ ಸೆ.10 NEWS DESK : ಪ್ರಸಕ್ತ (2024-25) ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಯುವಕ, ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟಿಷಿಯನ್, ಚಾಟ್ಸ್ ತಯಾರಿಕೆ ತರಬೇತಿ ಶಿಬಿರಗಳನ್ನು ಇಲಾಖೆ ವತಿಯಿಂದ ಆಯೋಜಿಸಲಾಗಿದೆ.
ತರಬೇತಿಯ ವಿವರ ಇಂತಿದೆ. ಸೆಪ್ಟೆಂಬರ್, 19 ರಿಂದ ಅಕ್ಟೋಬರ್, 03 ರವರೆಗೆ ಜಿಮ್/ ಫಿಟ್ನೆಸ್ ತರಬೇತಿ ಶಿಬಿರ(15 ದಿನಗಳು). ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ 18 ರಿಂದ 40 ವರ್ಷದೊಳಗಿರಬೇಕು. ತರಬೇತಿಯು ಬೆಂಗಳೂರಿನ ಕಸ್ತೂರಬಾ ರಸ್ತೆಯ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೆಪ್ಟೆಂಬರ್, 21 ರಿಂದ ಅಕ್ಟೋಬರ್, 03 ರವರೆಗೆ ಬ್ಯೂಟೀಷಿಯನ್ ತರಬೇತಿ ಶಿಬಿರ(13 ದಿನಗಳು) ನಡೆಯಲಿದ್ದು, ಎಸ್ಎಸ್ಎಲ್ಸಿ(ಪಾಸ್/ಫೇಲ್) ಮಹಿಳೆಯರಿಗೆ ಮಾತ್ರ. ಕನಿಷ್ಠ 18 ವರ್ಷದಿಂದ 40 ವರ್ಷದೊಳಗಿರಬೇಕು. ತರಬೇತಿಯು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಕ್ಟೋಬರ್, 04 ರಿಂದ 09 ರವರೆಗೆ ಚಾಟ್ಸ್ ತಯಾರಿಕೆ ತರಬೇತಿ ಶಿಬಿರ ನಡೆಯಲಿದೆ. ಎಸ್ಎಸ್ಎಲ್ಸಿ(ಪಾಸ್/ಫೇಲ್) ಕನಿಷ್ಠ 18 ರಿಂದ 40 ವರ್ಷದೊಳಗಿರಬೇಕು. ತರಬೇತಿಯು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ತರಬೇತಿಯನ್ನು ಕರ್ನಾಟಕದ ಯುವಕ, ಯುವತಿಯರಿಗೆ ಮಾತ್ರ ನೀಡಲಾಗುವುದು. ಯುವಕ, ಯುವತಿಯರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಅರ್ಜಿದಾರರು ಕಡ್ಡಾಯವಾಗಿ ಆರ್ಡಿ ಸಂಖ್ಯೆಯಿರುವ ಜಾತಿ ಪ್ರಮಾಣ ಪತ್ರ ಲಗತ್ತಿಸಬೇಕು. ಅರ್ಜಿದಾರರ ಹೆಸರು ಹಾಗೂ ಭಾವಚಿತ್ರವುಳ್ಳ ಆಧಾರ್ ಪತ್ರವನ್ನು ಲಗತ್ತಿಸಬೇಕು. ಜಿಮ್ ಫಿಟ್ನೆಸ್, ಬ್ಯೂಟಿಷಿಯನ್, ಚಾಟ್ಸ್ ತಯಾರಿಕೆ ತರಬೇತಿಗಳಿಗೆ ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ ಪಾಸ್/ಫೇಲ್ ಶಿಕ್ಷಣವನ್ನು ಹೊಂದಿರಬೇಕು. (ದೃಢೀಕೃತ ಅಂಕಪಟ್ಟಿಯನ್ನು ಪ್ರತಿಯನ್ನು ಲತ್ತಿಸಬೇಕು). ಅರ್ಜಿದಾರರ ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ಉಪ/ ಸಹಾಯಕ ನಿರ್ದೇಶಕರಿಂದ ದೃಢೀಕರಿಸಿ ಸಲ್ಲಿಸಬೇಕು. ತರಬೇತಿ ಶಿಬಿರದಲ್ಲಿ ಭಾಗವಹಿಸುವ ಯುವಕ, ಯುವತಿಯರಿಗೆ ಲಘು ಉಪಹಾರ ಒದಗಿಸಲಾಗುವುದು. ಹೊರ ಜಿಲ್ಲೆಗಳಿಂದ ಆಗಮಿಸುವ ಶಿಬಿರಾರ್ಥಿಗಳಿಗೆ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಅರ್ಜಿದಾರರು ದೈಹಿಕವಾಗಿ ಸದೃಢರಾಗಿರಬೇಕು. ಕೊಡಗು ಜಿಲ್ಲೆಯ ಆಸಕ್ತ ಕ್ರೀಡಾಪಟುಗಳು ಅರ್ಜಿ ನಮೂನೆಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಮಡಿಕೇರಿಯಲ್ಲಿ ಪಡೆದು ಸೆಪ್ಟೆಂಬರ್, 17 ರೊಳಗೆ ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂ.ಸಂ.08272-220986 ಮತ್ತು ತರಬೇತುದಾರರು 9980887499 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ತಿಳಿಸಿದ್ದಾರೆ.