
ಮಡಿಕೇರಿ ಅ.14 NEWS DESK : ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಅ.17 ರಂದು ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ತೀರ್ಥೋದ್ಭವ ನಡೆಯಲಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ತುಲಾ ಸಂಕ್ರಮಣ ಜಾತ್ರೆಯ ಪೂರ್ವಭಾವಿಯಾಗಿ ಸೆ.26 ರಂದು ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 8.35ಕ್ಕೆ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅ.4 ರಂದು ಬೆಳಿಗ್ಗೆ 10.21ಕ್ಕೆ ಆಜ್ಞಾ ಮುಹೂರ್ತ, ಅ.14 ರಂದು ಬೆಳಗ್ಗೆ 11.35 ಗಂಟೆಗೆ ಅಕ್ಷಯ ಪಾತ್ರೆ ಇಳಿಸುವುದು, ಸಂಜೆ 4.15 ಗಂಟೆಗೆ ಕಾಣಿಕೆ ಡಬ್ಬ ಇಳಿಸುವ ಕಾರ್ಯಕ್ರಮಗಳು ನಡೆಯಲಿದೆ.











