
ವಿರಾಜಪೇಟೆ ಸೆ.14 NEWS DESK : ವಿರಾಜಪೆಟೆಯ ಮೂರ್ನಾಡು ರಸ್ತೆಯಲ್ಲಿನ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿಯ 34ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮತ್ತು ನಾಟ್ಯಾಂಜಲಿ ನೃತ್ಯ ಮತ್ತು ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ಮನಸೂರೆಗೊಳಿಸಿತು. ಗಣೇಶನ ಸ್ತೋತ್ರದ ನಾಟ್ಯದೊಂದಿಗೆ ಆರಂಭಗೊಂಡ ನೃತ್ಯ ವೈಭವ ರಾಮ ನೃತ್ಯ, ತೆಲುಗು ನೃತ್ಯ, ಶ್ಲೋಕಾಂಜಲಿ, ಶಿವ ತಾಂಡವ, ಭರತನಾಟ್ಯ, ಜಾನಪದ ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪ್ರದರ್ಶನಗೊಂಡು ಹತ್ತಾರು ಸುಂದರ ವೈವಿದ್ಯಮಯ ಹಾಡಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿ ಎಲ್ಲರನ್ನು ಮನರಂಜಿಸಿದರು. ಪುಟಾಣಿ ಮಕ್ಕಳ ಭರತನಾಟ್ಯ ಎಲ್ಲರ ಗಮನ ಸೆಳೆಯಿತು. ನಾಟ್ಯಾಂಜಲಿ ನೃತ್ಯ ಸಂಸ್ಥೆಯ ನೃತ್ಯ ಗುರುಗಳಾದ ಕಾವ್ಯಶ್ರೀ ತಮ್ಮ ಮನಮೋಹಕ ಭರತನಾಟ್ಯದ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ನಾಟ್ಯಾಂಜಲಿ ನೃತ್ಯ ಶಾಲೆಯ ಸಂಸ್ಥಾಪಕಿ ಹೇಮಾವತಿ ಕಾಂತರಾಜ್, ಕಾವೇರಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಆನಂದ್ ರಾಜಪ್ಪ, ಕಾರ್ಯದರ್ಶಿ ವಿ.ಜೆ. ರಾಕೇಶ್ ಸೇರಿದಂತೆ ಹಲವಾರು ಮಂದಿ ಪ್ರೇಕ್ಷಕರು ಹಾಜರಿದ್ದರು.










