ಪೆರಾಜೆ ಸೆ.18 NEWS DESK : ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ 7ನೇ ವಾರ್ಷಿಕ ಮಹಾಸಭೆಯು ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಸಹಕಾರ ಸಂಘವು ವರದಿ ವರ್ಷದಲ್ಲಿ 193 ಕೋಟಿ ವಾರ್ಷಿಕ ವ್ಯವಹಾರವನ್ನು ನಡೆಸಿ 38.47 ಲಕ್ಷ ಲಾಭಗಳಿಸಿದೆ. ವಿಶೇಷವಾಗಿ ರಬ್ಬರ್ ವ್ಯವಹಾರ ಮಾಡಿದ ಸದಸ್ಯರುಗಳಿಗೆ ಕೆ.ಜಿಗೆ ರೂ 2 ರಂತೆ ಪ್ರೋತ್ಸಾಹ ಧನವನ್ನು ನೀಡಲು 5.95 ಲಕ್ಷಗಳ ಮೊತ್ತವನ್ನು ಕಾಯ್ದಿರಿಸಲಾಗಿದೆ. ಸದಸ್ಯರಿಗೆ ಶೇ. 8 ರಂತೆ ಡಿವಿಡೆಂಡ್ ಘೋಷಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಉಪಾಧ್ಯಕ್ಷ ಪಿ.ಎಂ.ಅಶೋಕ, ನಿರ್ದೇಶಕರುಗಳಾದ ಹೊನ್ನಪ್ಪ ಅಮಚೂರು, ಜಯರಾಮ ನಿಡ್ಯಮಲೆ ಬಿ, ಸೀತಾರಾಮ ಕದಿಕಡ್ಕ, ಧನಂಜಯ ಕೋಡಿ, ಪ್ರಮೀಳ ಬಂಗಾರಕೋಡಿ, ಪುಷ್ಪಾವತಿ ವ್ಯಾಪಾರೆ, ಪ್ರದೀಪ ಕೆ.ಎಂ, ದೀನರಾಜ್ ದೊಡ್ಡಡ್ಕ, ಶೇಷಪ್ಪ ನಾಯ್ಕ ನಿಡ್ಯಮಲೆ, ಪಿ.ಟಿ.ಜಯರಾಮ, ಕಿರಣ್ ಬಂಗಾರಕೋಡಿ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಕೆ.ಜಿ.ಶ್ರೀನಿವಾಸ್ ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ನಿರ್ದೇಶಕರಾದ ಪ್ರಮೀಳಾ ಬಂಗಾರಕೋಡಿ ವಂದಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಕೆ.ಲೋಕೇಶ್ ಸರ್ವರನ್ನು ಸ್ವಾಗತಿಸಿ, ವರದಿ ಮಂಡಿಸಿದರು.