ಮಡಿಕೇರಿ ಸೆ.24 NEWS DESK : ಆಧುನಿಕ ತಂತ್ರಜ್ಞಾನ ಮತ್ತು ನವ ಅವಿಷ್ಕಾರದೊಂದಿಗೆ ನಿರಂತರವಾಗಿ ವೈದ್ಯರು ಹೊಸವಿಚಾರಗಳೊಂದಿಗೆ ವೃತ್ತಿಯಲ್ಲಿ ಬೆಳೆಯುತ್ತಿರಬೇಕು. ಸಾಮಾಜಿಕ ಜಾಲತಾಣವನ್ನು ಹೇಗೆ ಸದುಪಯೋಗಪಡಿಸಿಕೊಂಡು ಪ್ರಪಂಚದ ಯಾವ ಮೂಲೆಯಲ್ಲೂ ಆಯುರ್ವೇದ ತಲುಪುವಂತೆ ಮಾಡಬೇಕು ಎಂದು ಸುಳ್ಯದ ಆಯುಧಾ೯ಮ ಆಯುವೇ೯ದ ಆಸ್ಪತ್ರೆಯ ಸ್ಥಾಪಕರಾದ ಡಾ.ಹರಿಪ್ರಸಾದ್ ಶೆಟ್ಟಿ ಕರೆ ನೀಡಿದ್ದಾರೆ. ನಗರದ ಆಕ್ಸಿರಿಚ್ ಹೋಟೇಲ್ ಸಭಾಂಗಣದಲ್ಲಿ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ನ ಕೊಡಗು, ಸಂಘದ ವತಿಯಿಂದ ಆಯೋಜಿತ ಆಯುರ್ವೇದ ವೈದ್ಯರಿಗೆ ನಿರಂತರ ಶಿಕ್ಷಣ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಜಾಗತಿಕ ಗ್ರಾಹಕರನ್ನು ತಲುಪಲು ಆಯುರ್ವೇದ ಕ್ಲಿನಿಕ್ ಅಥವಾ ಆಸ್ಪತ್ರೆಯನ್ನು ಹೇಗೆ ಅಭಿವೃದ್ಧಿಪಡಿಸುವುದು ಎನ್ನುವ ಬಗ್ಗೆ ಅವರು ಮಾಹಿತಿ ನೀಡಿದರು.
ನೂತನ ಅಧ್ಯಕ್ಷರಾಗಿ ಡಾ ರಾಜಾರಾಮ್ :: ಎನ್.ಐ.ಎಂ.ಎ ಕೊಡಗು 2024-26 ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯು ನಡೆಯಿತು. ನೂತನ ಅಧ್ಯಕ್ಷರಾಗಿ ಡಾ.ರಾಜಾರಾಮ್, ಕಾರ್ಯದರ್ಶಿಯಾಗಿ ಡಾ. ಪಿ.ಎಸ್.ಶ್ಯಾಮ್ ಪ್ರಸಾದ, ಖಜಾಂಚಿಯಾಗಿ ಡಾ.ಪದ್ಮನಾಭ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಡಾ.ಶೈಲಜಾ ರಾಜೇಂದ್ರ, ಕಾರ್ಯದರ್ಶಿಯಾಗಿ ಡಾ. ಸೌಮ್ಯ, ಖಜಾಂಚಿಯಾಗಿ ಡಾ. ಹೀನ ಪುನರಾಯ್ಕೆಗೊಂಡರು. ಕೊಡಗು ಜಿಲ್ಲಾ ರಾಜ್ಯ ಪ್ರತಿನಿಧಿಗಳಾಗಿ ಡಾ.ಕುಲಕರ್ಣಿ.ಎನ್, ಡಾ.ಉದಯ್ ಕುಮಾರ್.ಎಸ್, ಡಾ. ಜ್ಯೋತಿ ರಾಜಾರಾಮ್, ಉಪಾಧ್ಯಕ್ಷರಾಗಿ ಡಾ. ರಾಜೇಂದ್ರ, ಡಾ.ಉದಯಶಂಕರ್.ಎಸ್. ಸಹಕಾರಿದರ್ಶಿಗಳಾಗಿ ಡಾ.ಲಕ್ಷ್ಮೀಶ,ಡಾ.ಮಹೇಶ್, ತಾಲೂಕು ಪ್ರತಿನಿಧಿಗಳು ಮಡಿಕೇರಿ ಡಾ.ಸಾವಿತ್ರಿ ಸೋಮವಾರಪೇಟೆ ಡಾ.ಸಂತೋಷ್ ವಿರಾಜಪೇಟೆ ಡಾ.ರೋಷನ್ ಗೋಣಿಕೊಪ್ಪ ಡಾ. ಸುಬ್ರಮಣ್ಯ ರಾವ್, ಕುಶಾಲನಗರ ಡಾ. ರಾಜಾರಾಮ್ ಶೆಟ್ಟಿ, ನಿರಂತರ ಅಧ್ಯಯನ ಸಮಿತಿ ಡಾ. ಈಶ್ವರಿ ಉದಯಶಂಕರ,ಡಾ. ಅದಿತಿ, ಮಹಿಳಾ ಪ್ರತಿನಿಧಿ ಡಾ.ಅರುಣಾ ಕುಲಕರ್ಣಿ, ವೈದ್ಯ ವಿಮಾ ಯೋಜನೆ ಪ್ರತಿನಿಧಿ ಡಾ.ರಕ್ಷಿತ್,ನಕಲಿ ವೈದ್ಯ ವಿರೋಧ ಸಮಿತಿ ಡಾ.ನಿತಿನ್,ಡಾ.ತುಂಗಾ, ಜನ-ಮಾಧ್ಯಮ ಸಂಪರ್ಕ ಡಾ. ಅನುಷಾ ಅಧಿಕಾರ ಸ್ವೀಕರಿಸಿದರು. 33 ವೈದ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ಅನುಷಾ ಸ್ವಾಗತಿಸಿ, ಡಾ. ನಿಧಿ ಸಂಪನ್ಮೂಲ ವ್ಯಕ್ತಿ ಪರಿಚಯ ಮಾಡಿದರು. ಕಾಯ೯ಕ್ರಮವನ್ನು ಡಾ.ಸೌಮ್ಯ ನಿರ್ವಹಿಸಿದರು, ಡಾ.ಅಧಿತಿ ವಂದಿಸಿದರು.