ಮಡಿಕೇರಿ ಸೆ.24 NEWS DESK : ಕೊಡಗು ಜಿಲ್ಲಾ ಹೊಟೇಲ್, ರೆಸಾಟ್೯, ರೆಸ್ಟೋರೆಂಟ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ದಿನೇಶ್ ಕಾಯ೯ಪ್ಪ ಆಯ್ಕೆಯಾಗಿದ್ದು, ಪ್ರಧಾನ ಕಾಯ೯ದಶಿ೯ಯಾಗಿ ನಾಸೀರ್ ಅಹಮ್ಮದ್ ಆಯ್ಕೆಯಾಗಿದ್ದಾರೆ. ಮಡಿಕೇರಿಯ ಫೋಟ್೯ ಮಕೇ೯ರಾ ಹೊಟೇಲ್ ನಲ್ಲಿ ಜರುಗಿದ ಸಂಘದ ವಾಷಿ೯ಕ ಮಹಾಸಭೆಯಲ್ಲಿ ನಿಕಟಪೂವ೯ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅವರು ಅಧಿಕಾರವನ್ನು ದಿನೇಶ್ ಕಾಯ೯ಪ್ಪ ಅವರಿಗೆ ಹಸ್ತಾಂತರಿಸಿದರು. ಸಂಘದ ಪ್ರಧಾನ ಕಾಯ೯ದಶಿ೯ಯಾಗಿ ಎಂ.ಎ.ನಾಸೀರ್ ಅಹ್ಮದ್, ಮಡಿಕೇರಿ ವಿಭಾಗದ ಉಪ ಅಧ್ಯಕ್ಷರಾಗಿ ಎಂ.ಬಿ.ಝಹೀರ್ ಅಹ್ಮದ್ , ವಿರಾಜಪೇಟೆ ವಿಭಾಗದ ಉಪ ಅಧ್ಯಕ್ಷರಾಗಿ ಬಿ.ಸಿ.ಮಂಜುನಾಥ್ , ಸೋಮವಾರಪೇಟೆ ವಿಭಾಗದ ಉಪ ಅಧ್ಯಕ್ಷರಾಗಿ ಸುಂದರ್ ಹಾಗೂ ಕುಶಾಲನಗರ ವಿಭಾಗದ ಉಪಾಧ್ಯಕ್ಷರಾಗಿ ರಥೀಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ನಾಸೀರ್ ಅಹಮ್ಮದ್ ವರದಿ ಮಂಡಿಸಿದರೆ, ಖಜಾಂಚಿ ಭಾಸ್ಕರ್ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಥಹೀರ್ ಸಂಘದ ಕಾಯ೯ಚಟುವಟಿಕೆ ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಹೋಟೆಲ್ ಅಸೋಸಿಯೇಷನ್ ನ ಹಿರಿಯ ಸದಸ್ಯ ಮಡಿಕೇರಿಯ ಹೋಟೆಲ್ ಚಿತ್ರಾದ ಮಾಲೀಕ ಗಣೇಶ್ ಮತ್ತು ಸಂಘದ ನಿಕಟಪೂವ೯ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಮಂಜುನಾಥ್ ವಂದಿಸಿದರು.