ಮಡಿಕೇರಿ ಸೆ.25 NEWS DESK : ಹಾಕತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನಲ್ಲಿ 10ನೇ ತರಗತಿ ಓದುತ್ತಿದ್ದ ಬಿ.ಎನ್.ಪೃಥ್ವಿ ವಿಜ್ಞಾನ ಶಿಕ್ಷಕಿ ಎಂ.ವನಜ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ ಕಾಳುಮೆಣಸು ಶುದ್ಧೀಕರಿಸುವ ಯಂತ್ರದ ಪರಿಕಲ್ಪನೆಯು ರಾಷ್ಟ್ರೀಯ ಮಟ್ಟದ ಇನ್ಸ್‌ಪೈರ್ ಮಾನಕ್ ಅವಾರ್ಡ್ ಗೆ ಆಯ್ಕೆಯಾಗಿದೆ. ಪೃಥ್ವಿ ಮಂಡಿಸಿದ ಈ ಪರಿಕಲ್ಪನೆಯ ಸಾಧನವು ಸಣ್ಣ ಖರ್ಚಿನಲ್ಲಿ ಕಾಳುಮೆಣಸು ಶುದ್ಧೀಕರಿಸುವ ಯಂತ್ರವಾಗಿದ್ದು, ಇಂದಿನ ದುಬಾರಿ ಜೀವನದಲ್ಲಿ ರೈತರಿಗೆ ಇದು ವರದಾನವಾಗಲಿದೆ. ಪೃಥ್ವಿ ಪ್ರಸ್ತುತ ಸಂತ ಮೈಕಲರ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇವಳು ಮೇಕೇರಿ ಗ್ರಾಮದ ಬಿಲ್ಲವರ ನಂದಕುಮಾರ್ ಮತ್ತು ಶಶಿಕಲ ದಂಪತಿಯ ಪುತ್ರಿ.