ಸಿದ್ದಾಪುರ ಸೆ.24 NEWS DESK : ಗುಹ್ಯ, ಕರಡಿಗೋಡು, ಸಿದ್ದಾಪುರ ಸುತ್ತಮುತ್ತಲ ಸದಸ್ಯರ ಸಹಕಾರದಿಂದ ಸಿದ್ದಾಪುರದ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಗತಿಯತ್ತ ಸಾಗುತ್ತಿದ್ದು, 2023 -24ನೇ ಸಾಲಿನ ಪ್ರಸಕ್ತ ವರ್ಷ 1.06ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎಸ್.ವೆಂಕಟೇಶ್ ತಿಳಿಸಿದ್ದಾರೆ. ಸಿದ್ದಾಪುರ ಎಂ.ಜಿ.ರಸ್ತೆಯಲ್ಲಿರುವ ಸಂಘದ ಕಟ್ಟಡ ಸಭಾಂಗಣದಲ್ಲಿ ನಡೆದ 94ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಗುಹ್ಯ, ಕರಡಿಗೋಡು, ಸಿದ್ದಾಪರ ಈ ಮೂರು ಗ್ರಾಮಗಳ ವ್ಯಾಪ್ತಿಯನ್ನೊಳಗೊಂಡ ಗುಹ್ಯ ಅಗಸ್ತೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಾಲು ಬಂಡವಾಳ ರೂ. 2.23 ಕೋಟಿಗಳಿದ್ದು, ಠೇವಣಿಗಳು ರೂ.46.15 ಕೋಟೆ ಹಾಗೂ ಸದಸ್ಯರುಗಳಿಗೆ ಕೃಷಿ ಹಾಗೂ ಕೃಷಿಯೇತರ ಸಾಲ ಸೇರಿ ಒಟ್ಟು ರೂ. 30.20 ಕೋಟೆ ಹೊರಬಾಕಿ ಸಾಲವಿರುತ್ತದೆ. ಸಂಘದಲ್ಲಿ ದುಡಿಯುವ ಬಂಡವಾಳ ರೂ. 56.16 ಕೋಟಿ ಹಾಗೂ 2023-24 ನೇ ಸಾಲಿನಲ್ಲಿ ರೂ. 225.77 ಕೋಟಿ ವ್ಯವಹಾರ ನಡೆಸಲಾಗಿದೆ. ಪ್ರಸಕ್ತ ವರ್ಷ ರೂ. 1.06 ಕೋಟಿ ಲಾಭ ಗಳಿಸಿರುತ್ತದೆ. ಇದರಿಂದ ಸಂಘದ ಸದಸ್ಯರುಗಳಿಗೆ 20 ಶೇ. ಡಿವಿಡೆಂಡ್ ನೀಡಲು ಮಹಾಸಭೆಯಲ್ಲಿ ತೀರ್ಮಾನಿಸಲಾಗಿದೆ. ಡೀಸಲ್/ ಪೆಟ್ರೋಲ್ ವ್ಯಾಪಾರದಲ್ಲಿ ರೂ. 21.81 ಕೋಟಿ ವ್ಯವಹಾರ ನಡೆಸಲಾಗಿದೆ. ಸಂಘದಿಂದ ಈ ಬಾರಿ ಸದಸ್ಯರುಗಳಿಗೆ ಸಂಘದಲ್ಲಿ ವ್ಯವಹಾರ ನಡೆಸಿರುವುದನ್ನು ಗುರುತಿಸಿ ಗುಹ್ಯ ಗ್ರಾಮದಿಂದ ಕೆ ಜಿ ಮ್ಯಾತ್ಯು, ಸಿದ್ದಾಪುರ ಗ್ರಾಮದಿಂದ ಎಂ.ಕೆ ಮಣಿ ಮತ್ತು ಕರಡಿಗೋಡು ಗ್ರಾಮದಿಂದ ಕುಕ್ಕುನೂರು ನಾಣಯ್ಯ ಮತ್ತು ಕೃಷಿಯಲ್ಲಿ ಉತ್ತಮ ಕೃಷಿಕನಾಗಿ ಸಾಧನೆ ಮಾಡಿದ ಕರಡಿಗೋಡು ಗ್ರಾಮದ ಕೆ.ಕೆ.ದಿನೇಶ್ ಅವರನ್ನು ಸಂಘದ ವತಿಯಿಂದ ಮಹಾಸಭೆಯಲ್ಲಿ ಸನ್ಮಾನಿಸಿ ಕಿರುಕಾಣಿಕೆ ನೀಡಿ ಗೌರವಿಸಲಾಯಿತು. ಉತ್ತಮ ವ್ಯವಹಾರ ನಡೆಸಿದ 3 ಸ್ವ ಸಹಾಯ ಗುಂಪುಗಳಿಗೆ ತಲಾ ರೂ. 5 ಸಾವಿರ ಬಹುಮಾನ ನೀಡಲಾಯಿತು. ಸಂಘವು ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ತಲಾ ರೂ. 2ಸಾವಿರ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ತಲಾ ರೂ.5ಸಾವಿರ ವಿತರಿಸಿರಿಸಲಾಗಿದೆ. ಮರಣಪಟ್ಟ ಸದಸ್ಯರ ಕುಟುಂಬದವರಿಗೆ ಅಂತ್ಯಕ್ರಿಯೆ ಹಣವೆಂದು ತಲಾ ರೂ. 5ಸಾವಿರ ಸಹಾಯಧನವನ್ನು ನೀಡಲಾಗಿದೆ ಎಂದರು
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ಬಿಜಾಯ್, ಸದಸ್ಯರುಗಳಾದ ಎಸ್.ಬಿ.ಪ್ರತೀಶ್, ವಾಸು, ಚಂದ್ರನ್, ಶೀಬು, ಪ್ರಮೀಳ, ಸುನಿಲ್, ಬಶೀರ್, ದೇವಯಾನಿ, ಮಿಲನ್ , ಚೆಲುವಯ್ಯ, ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಮತ್ತಿತ್ತರು ಹಾಜರಿದ್ದರು.