ಸುಂಟಿಕೊಪ್ಪ ಸೆ.25 NEWS DESK : ರಂಗಸಮುದ್ರ, ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತದ 86ನೇ ವಾರ್ಷಿಕ ಮಹಾಸಭೆಯು ದವಸ ಭಂಡಾರ “ಎ” ಕಟ್ಟಡದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಪಿ.ಎಸ್.ಬಸಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಕೆಳೆದ ಅವಧಿಯ ಮಹಾಸಭೆಯ ವರದಿಯನ್ನು ಹಾಗೂ ಸಭೆಯಲ್ಲಿ 2023-24ರ ಸಾಲಿನ ಜಮಾ-ಖರ್ಚು ಕರಡು ಪ್ರತಿಯನ್ನು ವಾಚಿಸುವ ಮೂಲಕಸಭೆಯ ಅಂಗೀಕಾರ ಪಡೆಯಲಾಯಿತು. ಪ್ರಸಕ್ತ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಮಂಡಿಸಲಾಯಿತು. ಪ್ರಸ್ತುತ ಕಾರ್ಯನಿರ್ಸುತ್ತಿರುವ ಆಡಳಿತ ಮಂಡಳಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಯಕಾರಿ ಮಂಡಳಿಯನ್ನು ಯಥವತ್ತಾಗಿ ಮುಂದುವರಿಸಲು ಸದಸ್ಯರಾದ ಬಸಪ್ಪ ಹಾಗೂ ನಂದಿನೆರವಂಡ ಅಚ್ಚಯ್ಯ ಸೇರಿದಂತೆ ಮತ್ತಿತರರು ಸಲಹೆ ನೀಡಿದರು. ಮಹಾಸಭೆಯಲ್ಲಿ ಸದಸ್ಯರುಗಳು ನೀಡಿದ ಅನೇಕ ಅಭಿವೃದ್ಧಿಪರ ಅಂಶಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮವಹಿಸುವುದಾಗಿ ದವಸ ಭಂಡಾರದ ಅಧ್ಯಕ್ಷ ಪಿ.ಎಸ್. ಬಸಪ್ಪ ಭರವಸೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಆರ್.ಕೆ.ಚಂದ್ರ, ನಿರ್ದೇಶಕ ಎಂ.ಸಿ.ದಾಮೋದರ, ಹೆಚ್.ಬಿ.ರುದ್ರಪ್ಪ, ಎ.ಎಂ.ಲೋಕನಾಥ, ಪಿ.ಬಿ.ಆಶೋಕ, ಬಿ.ಎಸ್.ಧನಪಾಲ, ಟಿ.ಸಿ.ಶಿವಕುಮಾರ್, ಜಿ.ಆರ್.ಶಾರದ, ಕೆ.ಕೆ.ಲೀಲಾವತಿ, ಡಬ್ಲ್ಯೂ.ಪಿ.ಶಿವಕುಮಾರ್ ಮತ್ತಿತರರು ಹಾಜರಿದ್ದರು. ಕಾರ್ಯಕ್ರದಲ್ಲಿ ಜಾನಕಿ ಪ್ರಾರ್ಥಿಸಿದರು. ಎ.ಎಂ.ಲೋಕನಾಥ್ ಸ್ವಾಗತಿಸಿದರು. ಧನಪಾಲ ವಂದಿಸಿದರು.