ಕುಶಾಲನಗರ NEWS DESK ಸೆ.29 : ಕುಶಾಲನಗರದಲ್ಲಿ ನಾರಾಯಣ ಗುರುಗಳ 170 ನೇ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಹಿಂದೂ ಮಲಯಾಳಿ ಸಂಘದ ಜಿಲ್ಲಾಧ್ಯಕ್ಷರು ಆಗಿರುವ ವಿ.ಎಂ.ವಿಜಯ್ ಮಾತನಾಡಿ ಆಧುನಿಕ ತಂತ್ರಜ್ಞಾನದಿಂದಾಗಿ ಸನಾತನ ಹಿಂದೂ ಧರ್ಮ ಅಳಿವು ಉಳಿವಿನ ಬಗ್ಗೆ ಪ್ರತಿಯೊಬ್ಬರು ಚಿಂತನೆ ಮಾಡಬೇಕಾಗಿದೆ. ಹಿರಿಯರು ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕಾಗಿದೆ. ಧರ್ಮ, ಸಂಸ್ಕ್ರತಿ ಸಂಪ್ರದಾಯಗಳ ಪರಿಪಾಲನೆ ಮುಂದುವರೆಯಬೇಕು ಎಂದು ವಿಜಯ್ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನೀತಾ ಮಂಜುನಾಥ್, ನಾರಾಯಣ ಗುರುಗಳು ಸಮಾಜಕ್ಕೆ ನೀಡಿರುವ ಸಂದೇಶಗಳು, ಮಾರ್ಗದರ್ಶನ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಎಸ್ ಎನ್ ಡಿಪಿ ಯೂನಿಯನ್ ಅಧ್ಯಕ್ಷರಾದ ವಿ.ಕೆ .ಲೋಕೇಶ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಾಳಜಿ ವಹಿಸಬೇಕು ಎಂದರು. ಕುಶಾಲನಗರ ವಲಯ ಎಸ್ ಎನ್ ಡಿ ಪಿ ವಲಯ ಅಧ್ಯಕ್ಷ ಕೆ.ಟಿ.ಗಣೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಸಮಾಜದ ಅಧ್ಯಕ್ಷ ಪಿ.ರವೀಂದ್ರನ್, ಹಿಂದೂ ಮಲೆಯಾಳಿ ಸಮಾಜದ ಜಿಲ್ಲಾ ನಿರ್ದೇಶಕ ಟಿ.ಕೆ.ಸುಧೀರ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಟಿ.ಆರ್.ವಾಸುದೇವ್, ಬಾಲಕೃಷ್ಣ, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಎಸ್ ಎನ್ ಡಿಪಿ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷೆ ಸವಿತಾ, ಪ್ರಮುಖರಾದ ಎಂ ಆರ್ ಬಾಲಕೃಷ್ಣ, ಉದಯಕುಮಾರ್, ರಾಬಿನ್ ರಾಜೇಂದ್ರನ್, ಅನೀಶ್ ಕುಮಾರ್ ಮತ್ತಿತರರು ಇದ್ದರು. ಎಸ್ಎನ್ ಡಿಪಿ ಆಶ್ರಯದಲ್ಲಿ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಸಭಾಂಗಣದಲ್ಲಿ ಗುರುಪೂಜೆ ನೆರವೇರಿಸಲಾಯಿತು. ನಂತರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸುನಿತಾ ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು.