ಮೈಸೂರು NEWS DESK ಸೆ.29 : ಮೈಸೂರಿನ ಅರಮನೆ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ನಡೆದ ಜಾಥಾದಲ್ಲಿ ಕೊಡಗು ಜಿಲ್ಲೆಯನ್ನು ಕೊಡವ ಕೂಟಾಳಿಯಡ ಕೂಟದ ಸದಸ್ಯರು ಪ್ರತಿನಿಧಿಸಿದರು. ಅರಮನೆ ಮೈದಾನದಿಂದ ಬನ್ನಿ ಮಂಟಪದವರೆಗೆ ನಡೆದ ಈ ಮೆರವಣಿಗೆಯಲ್ಲಿ ಕೊಡಗಿನ ಕೊಡವ ಪಡೆಯಾಳಿಗಳು ಎನ್ನುವ ಪರಿಕಲ್ಪನೆಯಲ್ಲಿ ಕೊಡಗಿನ ಸಂಸ್ಕೃತಿ ಯನ್ನು ಪ್ರತಿಬಿಂಬಿಸುವ ತಳಿಯತಕ್ಕಿ ದೀಪ, ದುಡಿ ಕೊಟ್ಟ್ ಪಾಟ್,ನ ಜೊತೆಗೆ ಕೊಡವ ಸಂಸ್ಕೃತಿಯ ಅಂಗವಾದ, ಒಡಿಕತ್ತಿ, ಬಿಲ್ಲು, ಬಾಣ, ಬಜಿ೯, ಹಿಡಿದು ಜಾಥಾ ನಡೆಸಲಾಯಿತು. ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ, ಕಾರ್ಯಕ್ರಮ ಸಂಚಾಲಕ ಕಾಳಮಂಡ ರಾಬಿನ್ ಅಚ್ಚಮ್ಮ, ಖಜಾಂಜಿ ಬೊಜ್ಜಂಗಡ ಭವ್ಯ ದೇವಯ್ಯ ನಿರ್ದೇಶಕ ಅಮ್ಮಾಟಂಡ ಚೇತನ್ ಅಪ್ಪಯ್ಯ ಸದಸ್ಯರಾದ ಇಟ್ಟಿರ ಭವ್ಯ ಈಶ್ವರ್ ಹಾಗೂ ಮಾಚಂಗಡ ಸಚಿನ್ ತಿಮ್ಮಯ್ಯ, ಚೇಂದಿರ ಅಬಿನ್ ನಾಣಯ್ಯ, ಬುಟ್ಟಿಯಂಡ ಕಾರ್ಸನ್ ಕಾರ್ಯಪ್ಪ, ಕಾಯಪಂಡ ಇಶಾನ್ ಪೂಣಚ್ಚ, ಪೊನ್ನೋಲತಂಡ ಶರಣು ತಮ್ಮಯ್ಯ, ಕೇಳಪ್ಪಂಡ ಲಿಂಕಿತ್ ತಿಮ್ಮಯ್ಯ, ಚಪ್ಪಂಡ ಪೂರ್ವಿಕ್ ಪೊನ್ನಣ್ಣ, ಚೋಳಂಡ ತರುಣ್ ಗಣಪತಿ, ಕಾಯಪ್ಪಂಡ ತ್ರಿಶ ಮುತ್ತಮ್ಮ, ಮಾತಂಡ ಕುಶಿ ಉನ್ನತಿ, ಮಾಳೇಟಿರ ಯಶ್ಮ ಬೋಜಮ್ಮ, ಕೊಕ್ಕಂಡ ನಿಶಿ ಚೋಂದಮ್ಮ, ಮೂಕೊಂಡ ಸಂಜನಾ ದಮಯಂತಿ, ಅರಮಣಮಾಡ ದೇಶಿಕ ದೇಚಮ್ಮ, ಇಟ್ಟಿರ ಹಿತರ್ಥ್ ಕಾರ್ಯಪ್ಪ, ಮರುವಂಡ ರಿಷಿ ಕಾಯ೯ಪ್ಪ ಭಾಗವಹಿಸಿದ್ದರು.