ಮಡಿಕೇರಿ ಅ.1 NEWS DESK : ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಅ.5 ರಂದು ಮಲೆನಾಡ ಮಡಿಲಲ್ಲಿ ಜೆಸಿ ನಿಸರ್ಗ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಘಟಕದ ಅಧ್ಯಕ್ಷ ಪೆಮ್ಮಂಡ ಬೋಪಣ್ಣ ಅವರು ಪೊನ್ನಂಪೇಟೆ ತಾಲ್ಲೂಕಿನ ಬೇಗೂರುಕೊಲ್ಲಿಯಲ್ಲಿ ಒಂದು ದಿನ ನಡೆಯುವ ಕ್ರೀಡಾಕೂಟದ ಕುರಿತು ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ 9.30 ಗಂಟೆಗೆ ಪಂದ್ಯಾವಳಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರವೀಣ್ ಮುತ್ತಪ್ಪ, ಹುದಿಕೇರಿ ಗ್ರಾ.ಪಂ ಅಧ್ಯಕ್ಷರಾದ ಕುಪ್ಪಣಮಡ ಕೆ.ಕಾವೇರಮ್ಮ, ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠನಾ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವಲಯ 14 ಜೆಎಸಿ ವಲಯ ಆಡಳಿತ ಮಂಡಳಿಯ ಸಲಹೆಗಾರ ಎ.ಎಸ್.ನರೈನ್ ಕಾರ್ಯಪ್ಪ, ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಂ.ಎಂ.ನವೀನ್ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿ.ಶೆಟ್ಟಿಗೇರಿ ಗ್ರಾಮದ ನಾಮೇರ ನವೀನ್, ಮಾಯಣಮಡ ಎಸ್.ಚೇತನ್, ತೀತಿಮಡ ದೇವಯ್ಯ, ತೀತಿಮಡ ಮಂದಣ್ಣ, ನಿಟ್ಟೂರಿನ ಪೊರಂಗಡ ಪವನ್ ಡಾಲಿ, ಬಾಳೆಲೆಯ ತೀತಿಮಡ ಅಶಿಕ್, ಕಂಡಂಗಾಲ ಗ್ರಾಮದ ಅಪ್ಪಂಡೇರಂಡ ದಿನು, ನಾಪೋಕ್ಲುವಿನ ಅಪ್ಪಚಟ್ಟೋಳಂಡ ಪೊನ್ನಕ್ಕಿ ಕಾವೇರಪ್ಪ, ಬಿರುನಾಣಿ ಗ್ರಾಮದ ಕರ್ತಮಡ ರಾಯ್, ಆರ್ಜಿ ಗ್ರಾಮದ ಕೀತಿಯಂಡ ದೀಪು ಭಾಗವಹಿಸಲಿದ್ದಾರೆ. ಪುರುಷರಿಗೆ ಕಾಲ್ಚೆಂಡು, ಹಗ್ಗಜಗ್ಗಾಟ ಹಾಗೂ ಮಹಿಳೆಯರಿಗೆ ಕೆಸರುಗದ್ದೆ ಓಟದ ಸ್ಪರ್ಧೆ ನಡೆಯಲಿದೆ. ಕಾಲ್ಚೆಂಡು ಪಂದ್ಯಾವಳಿಯ ವಿಜೇತರಿಗೆ ರೂ.15,000 ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ರೂ. 10,000 ನಗದು ಹಾಗೂ ಟ್ರೋಫಿ, ಹಗ್ಗಜಗ್ಗಾಟ ವಿಜೇತರಿಗೆ ರೂ.10,000 ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ರೂ.7,000 ನಗದು ಹಾಗೂ ಟ್ರೋಫಿ ನೀಡಲಾಗುವುದು. ಮಹಿಳೆಯರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯ ವಿಜೇತರಿಗೆ ರೂ.7,000 ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ರೂ.5,000 ನಗದು ಹಾಗೂ ಟ್ರೋಫಿ ನೀಡಲಾಗವುದು. ಯುವಕ-ಯುವತಿಯರಿಗೆ ಸಬ್‍ಜೂನಿಯರ್, ಜೂನಿಯರ್ ಹಾಗೂ ಸಿನೀಯರ್ ಎಂಬ ಮೂರು ವಿಭಾಗದಲ್ಲಿ ಕೆಸರುಗದ್ದೆ ಓಟ ನಡೆಯಲಿದೆ. 10 ವರ್ಷದ ಒಳಗಿನ ಬಾಲಕ ಹಾಗೂ ಬಾಲಕಿಯರ ವಿಭಾಗದ ವಿಜೇತರಿಗೆ ರೂ.1,000, ದ್ವಿತೀಯ ಸ್ಥಾನ ರೂ.750, ತೃತೀಯ ರೂ.500 ನಗದು, ಪದಕ ಮತ್ತು ಪ್ರಶಂಸನಾ ಪತ್ರ ನೀಡಲಾಗುವುದು. 11 ರಿಂದ 15 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ವಿಭಾಗದ ವಿಜೇತರಿಗೆ ರೂ.1,000, ದ್ವಿತೀಯ ರೂ.750 ಹಾಗೂ ತೃತೀಯ ರೂ.500 ನಗದು, ಪದಕ ಹಾಗೂ ಪ್ರಶಂಸನಾ ಪತ್ರ ನೀಡಲಾಗುವುದು
16 ವರ್ಷ ಮೇಲ್ಪಟ್ಟ ಯುವಕ, ಯುವತಿಯರ ವಿಭಾಗದ ವಿಜೇತರಿಗೆ ರೂ.1,500, ದ್ವಿತೀಯ ರೂ.1,000 ಹಾಗೂ ತೃತೀಯ ರೂ.500 ನಗದು ಹಾಗೂ ಪದಕ, ಪ್ರಶಂಸನಾ ಪತ್ರ ನೀಡಲಾಗುವುದು. ಪುರುಷರಿಗೂ ಹಾಗೂ ಮಹಿಳೆಯರಿಗೆ ಕೊಡವ ವಾಲಗ ನೃತ್ಯ ಸ್ಪರ್ಧೆ ನಡೆಯಲಿದ್ದು, ಇದಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ವಿಜೇತರಿಗೆ ತಲಾ ರೂ.2000, ದ್ವಿತೀಯ 1,500 ಹಾಗೂ ತೃತೀಯ ರೂ.1,000 ನಗದು, ಪದಕ ಹಾಗೂ ಪ್ರಶಂಸನಾಪತ್ರ ನೀಡಲಾಗುವುದು. ಕಾಲ್ಚೆಂಡು ಹಾಗೂ ಹಗ್ಗಜಗ್ಗಾಟದಲ್ಲಿ ಸ್ಪರ್ಧಿಸುವವರು ಪ್ರವೇಶ ಶುಲ್ಕ ತಲಾ ರೂ.500ನ್ನು ಅ.3ರೊಳಗೆ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಪೆಮ್ಮಂಡ ಬೋಪಣ್ಣ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಅಧ್ಯಕ್ಷ ಪೆಮ್ಮಂಡ ಬೋಪಣ್ಣ 99453 75157, ಪೂರ್ವಾಧ್ಯಕ್ಷ ಅಪ್ಪಟೀರ ಟಾಟು ಮೊಣ್ಣಪ್ಪ 94492 55081, ನಿರ್ದೇಶಕ ಅಪ್ಪಂಡೇರಂಡ ದಿನೇಶ್ 91489 78919, ವಲಯ ನಿರ್ದೇಶಕ ಪಾರುವಂಗಡ ದಿಲ್ಲೋನ್ ಚಂಗಪ್ಪ 96116 40552, ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ 99725 38030, ಖಜಾಂಚಿ ಬೊಜ್ಜಂಗಡ ಚಂಗಪ್ಪ 98808 36849 ನ್ನು ಸಂಪರ್ಕಿಸಬಹುದಾಗಿದೆ.