ಸುಂಟಿಕೊಪ್ಪ ಅ.3 NEWS DESK : ಮಕ್ಕಳಿಗೆ ಶಿಕ್ಷಣದ ಜೋತೆಗೆ ಕ್ರೀಡೆಗೂ ಪ್ರೋತ್ಸಾಹ ನೀಡಬೇಕು ಎಂದು ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಹಾಗೂ ಅಥ್ಲಟಿಕ್ ಭಾನುಮತಿ ಮೆಂಡನ್ ಹೇಳಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆಯಲ್ಲಿ ಸ್ವಚ್ಛತಾ ಈ ಸೇವಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸಾಧನೆ ಮಾಡಲು ಪೋಷಕರ ಮತ್ತು ಶಿಕ್ಷಕರ ಹಾಗೂ ಒಡನಾಡಿ ಸಹಕಾರ ತುಂಬಾ ಅಗತ್ಯ ತಾವು ವಿವಾಹವಾದ ಮೇಲೂ ಕ್ರೀಡೆಯಲ್ಲಿ ಸಾಧನೆ ಮಾಡಲು ತಮ್ಮ ಪತಿ ಪ್ರೊ.ಎಂ.ಪಿ.ಪ್ರೇಮ್‍ಸುಬ್ಬಯ್ಯ ಸಹಕಾರ ನೀಡಿರುವುದನ್ನು ಸ್ಮರಿಸಿದ ಅವರು ಮಕ್ಕಳ ಆಸಕ್ತಿಯನ್ನು ಗುರುತಿಸಿ ಉತ್ತಮ ತರಬೇತಿ ನೀಡಿದಲ್ಲಿ ಸಾಧನೆ ಮಾಡುವುದರಲ್ಲಿ ಸಂಸಯವಿಲ್ಲ ಎಂದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹೆಚ್.ಟಿ.ರವೀಶ್ ಮಾತನಾಡಿ, ಗಾಂಧಿ ಜಯಂತಿಯ ದಿನದಂದು ಸರ್ಕಾರದ ಆದೇಶದ ಅನುಸಾರ ವಿಶೇಷ ಗ್ರಾಮಸಭೆಯನ್ನು ನಡೆಸಿ ವಿಶೇಷ ಕ್ರೀಯಾ ಯೋಜನೆಗಳನ್ನು ಘೋಷಣೆ ಮಾಡಿ ಗ್ರಾಮಸ್ಥರು ಮತ್ತು ಸಾರ್ವಜನಿಕರ ತಿಳುವಳಿಕೆಗೆ ತರಲಾಗುತ್ತದೆ. ಸ್ವಚ್ಛತಾ ಈ ಸೇವಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಕೊಡಗರಹಳ್ಳಿ ಅಂದಗೋವೆ ಮತ್ತು ಕಲ್ಲೂರು ಗ್ರಾಮಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನು ನಿಯಮನುಸಾರ ನಡೆಸಲಾಗುತ್ತಿದ್ದು, ಕೊಡಗರಹಳ್ಳಿ ಗ್ರಾ.ಪಂ ಯ ಎಲ್ಲಾ ಗ್ರಾಮಗಳನ್ನು ಓಡಿಎಫ್ ಮಾದರಿ ಗ್ರಾಮವೆಂದು ಘೋಷಿಸಲಾಗುತ್ತಿದೆ ಅವರು ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ ಸದಸ್ಯೆ ನಿರುತ ಬೆಳ್ಳಿಯಪ್ಪ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧಿಜಿ ಅವರ ಕೊಡುಗೆಯನ್ನು ಸ್ಮರಿಸಿದರು. ಗ್ರಾಮ ಪಂಚಾಯಿತಿ ಸಿಬ್ಬಂದಿ ಅಣ್ಣಪ್ಪ ಸನ್ಮಾನಿತರನ್ನು ಪರಿಚಯಿಸಿದರು. ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಪ್ರಾರ್ಥಿಸಿ, ಪಿಡಿಒ ರವೀಶ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಸಭೆಯಲ್ಲಿ ಗ್ರಾ.ಪಂ ಸದಸ್ಯರು, ಸಿಬ್ಬಂದಿ, ಶಾಲಾ ಮಕ್ಕಳು ಹಾಗೂ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಅವರು ಮಹಾತ್ಮ ಗಾಂಧೀಜಿ ಕುರಿತು ತಾವೇ ರಚಿಸಿದ ಗೀತೆಯೊಂದು ಹಾಡುವ ಮೂಲಕ ನೇರೆದಿದ್ದವರ ಗಮನ ಸೆಳೆದರು.