ಸುಂಟಿಕೊಪ್ಪ ಅ.3 NEWS DESK : ಜೌಪಚಾರಿಕ ಶಿಕ್ಷಣದ ಜೊತೆಗೆ ಅನಾಜೌಪಚಾರಿಕ ಶಿಕ್ಷಣವು ವಿದ್ಯಾರ್ಥಿಗಳಿಗೆ ಅತ್ಯಗತ್ಯವೆಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ವತಿಯಿಂದ ಸುಂಟಿಕೊಪ್ಪ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಪೊಲೀಸ್ ನಿಮ್ಮ ಸ್ನೇಹಿತ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಅಂತಂರಿಕವಾಗಿ ಕಾನೂನು ಸುವ್ಯವಸ್ಥೆ ಹಾಗೂ ನಾಗರೀಕ ಸೇವೆಗಳು ಉತ್ತಮವಾಗಿ ಲಭ್ಯವಾದಾಗ ರಾಷ್ಟ್ರವೊಂದು ಉತ್ತಮ ರಾಷ್ಟ್ರ ಎನ್ನಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳು ಶಾಲೆಯ ಒಳಗೆ ಹೊರಗೆ ಕಲಿಯುವುದಕ್ಕಿಂತಲೂ ಶಾಲೆಯ ಹೊರಗೆ ಕಲಿಯುವುದು ಬಹಳಷ್ಟಿದೆ. ಈಗಾಗಿ ಮಕ್ಕಳು ಏನ್ನನ್ನು ಕಲಿಯಬೇಕು ಏನ್ನನು ಕಲಿಯಬಾರದು ಎನ್ನುವ ಬಗ್ಗೆ ಜೀವನವಿಡಿ ಕಲಿಯುವ ಅಂಶಗಳಿದೆ ಎಂದು ಅವರು ವಿಶ್ಲೇಷಿಸಿದರು. ಪಾಸ್‍ಪೊರ್ಟ್ ಸೇರಿದಂತೆ ಕೆಲವೊಂದು ಮಹತ್ವದ ದಾಖಲೆಗಳಲ್ಲಿ ಪೊಲೀಸರ ಅಭಿಪ್ರಾಯ ಪರಿಶೀಲನೆ ಎಷ್ಟು ಅಗತ್ಯ ಎಂಬುದನ್ನು ಅವರು ಉದಾಹರಣೆಗಳೊಂದಿಗೆ ವಿವರಿಸಿದರು. ಇಂದಿನ ಮಕ್ಕಳಿಗೆ ಪತ್ರ ಬರೆಯುವ ಕಲ್ಪನೆಯೇ. ಇಲ್ಲ ಕಾಲ ಬದಲಾಗಿದ್ದು, ಎಲ್ಲಾವನ್ನೂ ಎಲ್ಲರನ್ನೂ ಮೊಬೈಲ್ ಆಕ್ರಮಿಸಿಕೊಂಡಿದೆ. ಹಿಂದೆ ಸ್ಥಿರ ದೂರವಾಣಿ ಇತ್ತು ಅದಕ್ಕಿಂತಲೂ ಮುಂಚಿತವಾಗಿ ಪತ್ರಲೇಖನಗಳು ತುಂಬಾ ಸೋಗಸಾಗಿದ್ದವು ಅದಕ್ಕಿಂತಲ್ಲೂ ಹಿಂದೆ ಮನೆ ಮನೆಗೆ ತೆರಳಿ ಸುದ್ದಿ ನೀಡಬೇಕಾಗಿತ್ತು ಹೀಗೆ ಇತಿಹಾಸದ ಅರಿವು ಮತ್ತು ಸಮಕಾಲಿನ ಬದುಕಿನ ಬಗ್ಗೆ ಅಲೋಚನೆ ಮಕ್ಕಳಿಗೆ ಬೇಕೆಂದು ಅವರು ಕಿವಿ ಮಾತು ಹೇಳಿದರು. ಮಾದಾಪುರ ಶ್ರೀಮತಿ.ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಕೆ.ವಿ.ರಾಜಸುದರಂ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್.ಯು.ರಫೀಕ್‍ಖಾನ್, ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕರಾದ ಎನ್.ಪ್ರಕಾಶ್, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಿ.ಇ.ನಂದ, ಶಿಬಿರಾಧಿಕಾರಿ ಮನೋಹರ್ ಎನ್.ಎನ್.ಮತ್ತಿತರರು ಇದ್ದರು.