ಸುಂಟಿಕೊಪ್ಪ ಅ.3 NEWS DESK : ಸುಂಟಿಕೊಪ್ಪ ಮಹಾತ್ಮಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಗರಗಂದೂರು ಮೊರಾರ್ಜಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಗಾಂಧಿ ಜಯಂತಿಯ ಅಂಗವಾಗಿ ವಿದ್ಯಾರ್ಥಿಗಳ ಕಾಲೇಜಿನ ಆವರಣದಲ್ಲಿ 25 ಕ್ಕೂ ಹೆಚ್ಚು ಹಣ್ಣಿನ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಲು ವಿದ್ಯಾರ್ಥಿಗಳಿಗೆ ದತ್ತು ನೀಡಲಾಯಿತು. ಟ್ರಸ್ಟ್ ಕಾರ್ಯದರ್ಶಿ ಡೆನಿಸ್ ಡಿಸೋಜ ಮಾತನಾಡಿ, 1934ರಲ್ಲಿ ಮಹಾತ್ಮಾ ಗಾಂದೀಜಿಯವರು ಕೊಡಗು ಜಿಲ್ಲೆಗೆ ಬಂದು ಗುಂಡುಗುಟ್ಟಿಯ ಮಂಜನಾಥಯ್ಯನವರ ಬಂಗಲೆಗೆ ಆಗಮಿಸಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದರು. ಅವರು ಬಂದು ತಂಗಿ ಹೋದ ಸವಿನೆನಪಿಗಾಗಿ ಆ ತೋಟದ ಮಾಲೀಕರಾದ ಮುಕುಲ್ ಮಹೀಂದ್ರ ಅವರೊಂದಿಗೆ ಒಂದು ಟ್ರಸ್ಟ್ ರಚಿಸಿದ್ದು ಆ ಟ್ರಸ್ಟ್ ಮೂಲಕ ಪ್ರತೀ ವರ್ಷ ಗಾಂಧಿ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಟ್ರಸ್ಟ್ ಸಂಚಾಲಕರಾದ ಎಂ.ಇ.ಮೊಹಿದ್ದೀನ್ ಮಾತನಾಡಿ, ಪರಿಸರದ ಬಗ್ಗೆ ನಾವುಗಳು ಜವಾಬ್ದಾರಿಕೆಯನ್ನು ಹೊಂದಬೇಕು ಮತ್ತು ಮರಗಳನ್ನು ಬೆಳೆಸುವುದರಿಂದ ನಾವು ನಿಸರ್ಗಕ್ಕೆ ಕೊಡಬಹುದಾದ ಮೌಲ್ಯದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ರಮೇಶ್ ಆರ್.ಪಿಳ್ಳೆ, ಮುರಾರ್ಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಪಿ.ಚಂದ್ರಶೇಖರ್ ಮತ್ತು ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.