ಮಡಿಕೇರಿ ಅ.4 NEWS DESK : ಮಡಿಕೇರಿ ದಸರಾ ಜನೋತ್ಸವ ಅಂಗವಾಗಿನ ಸಾಂಸ್ಕೃತಿಕ ಕಾಯ೯ಕ್ರಮಗಳಿಗೆ ಇಂದು (ಅ.4) ಸಂಜೆ 6 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಚಾಲನೆ ದೊರಕಲಿದ್ದು, ಜಿಲ್ಲಾಧಿಕಾರಿ ಮತ್ತು ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ ವೆಂಕಟ ರಾಜಾ ಕಾಯ೯ಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ.ತಿಳಿಸಿದ್ದಾರೆ. ಉದ್ಘಾಟನಾ ಕಾಯ೯ಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಸುಜಾಕುಶಾಲಪ್ಪ, ಶಾಸಕರುಗಳಾದ ಬೋಜೇಗೋಡ, ಧನಂಜಯ ಸಜಿ೯, ಮಾಜಿ ಶಾಸಕರಾದ ಕೆ ಜಿ ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಎಂ.ಪಿ.ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಮುಖ್ಯಕಾಯ೯ನಿವ೯ಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ನಗರಸಭೆ ಪೌರಾಯುಕ್ತ ರಮೇಶ್, ದಸರಾ ಸಮಿತಿ ಕಾಯಾ೯ಧ್ಯಕ್ಷ ಪ್ರಕಾಶ್ ಆಚಾಯ೯, ಪ್ರಧಾನ ಕಾಯ೯ದಶಿ೯ ರಾಜೇಶ್ ಬಿ.ವೈ, ಖಜಾಂಚಿ ಅರುಣ್ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇ೯ಶಕ ಕುಮಾರ್, ವಾತಾ೯ಧಿಕಾರಿ ಚಿನ್ನಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಕಾವ್ಯಶ್ರೀ ಕಪಿಲ್ ತಂಡದಿಂದ ನೖತ್ಯ, ವಿರಾಜಪೇಟೆಯ ಕಾವೇರಿ ಅಯ್ಯಪ್ಪ ತಂಡದಿಂದ ಹಾಡುಗಾರಿಕೆ ಎ ಕ್ರಿಯೇಟಿವ್ ಡಾನ್ಸ್ ಅಕಾಡೆಮಿಂದ ನೖತ್ಯ, ಸ್ಟೆಪ್ ಅಪ್ ಶೇಡೋ ತಂಡದಿಂದ ನೃತ್ಯ, ನಾಪೋಕ್ಲುವಿನ ರವಿ ಓಂಕಾರ್ ತಂಡದ ಸಂಗೀತ ರಸಮಂಜರಿ, ಸಂಪಾಜೆಯ ಸವಿತಾ ಕಿರಣ್ ತಂಡದ ನೃತ್ಯ, ಕಾಯ೯ಕ್ರಮಗಳು ಜತೆಗೆ ಸಾಕಷ್ಟು ವೈವಿಧ್ಯಮಯ ಕಾಯ೯ಕ್ರಮಗಳು ಮೊದಲ ದಿನದ ಆಕಷ೯ಣೆಗಳಾಗಿದೆ.