ಮಡಿಕೇರಿ ಅ.16 NEWS DESK : ಮೂರ್ನಾಡು ಎಂ.ಬಾಡಗ-1 ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಕೈತೊಳೆಯುವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಬಿ.ಬಿ.ಜಯಂತಿ ಮಾತನಾಡಿ, ಕೈಗಳ ಸ್ವಚ್ಛತೆ ಎಷ್ಟು ಮುಖ್ಯ ಮತ್ತು ಕೈ ತೊಳೆಯುವ ಆರು ವಿಧಾನಗಳನ್ನು ಅಳವಡಿಸಿಕೊಂಡು ಹೇಗೆ ಕೈಗಳ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು. ಪುಟಾಣಿ ಮಕ್ಕಳು, ಪೋಷಕರು, ಗ್ರಾ.ಪಂ ಸದಸ್ಯರಾದ ನಿಂಗಪ್ಪ, ಎಂ.ಬಾಡಗ ಅಂಗನವಾಡಿ ಕಾರ್ಯಕರ್ತೆ ಜಯಂತಿ ಮತ್ತು ಸಹಾಯಕಿ ಪ್ರೀತ ಹಾಜರಿದ್ದರು.