ಮಡಿಕೇರಿ ಅ.21 NEWS DESK : ಸಮಥ೯ ಕನ್ನಡಿಗರು ಸಂಸ್ಥೆ ವತಿಯಿಂದ ನವಂಬರ್ 3 ರಂದು ಭಾನುವಾರ ನಗರದ ಓಂಕಾರಸದನದಲ್ಲಿ ನಿಮ್ಮ ಪ್ರತಿಭೆ- ನಮ್ಮ ವೇದಿಕೆ, ಹಿಮವನ ಸಾಂಸ್ಕೃತಿಕ ಸಂಗಮ ಎಂಬ ಸಾಂಸ್ಕೃತಿಕ ಸ್ಪಧಾ೯ ಕಾಯ೯ಕ್ರಮಗಳನ್ನು ಮಹಿಳೆಯರು ಹಾಗೂ ಮಕ್ಕಳಿಗಾಗಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ ಜಯಲಕ್ಷ್ಮಿ ತಿಳಿಸಿದ್ದಾರೆ.
ಸ್ಪಧೆ೯ಗಳ ವಿವರಗಳು ಇಂತಿದೆ ::
ಛದ್ಮವೇಷ ಸ್ಪರ್ಧೆ : (1 ರಿಂದ 3 ವರ್ಷದ ಮಕ್ಕಳಿಗೆ ಮತ್ತು 4 ರಿಂದ 7 ವರ್ಷದ ಮಕ್ಕಳಿಗೆ) ಪ್ರತ್ಯೇಕ ವಿಭಾಗದಲ್ಲಿ ಹೆಸರು ನೋಂದಣಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ : 9902651146 – ಬಿ.ಸಿ.ಶಾಂತಿ.
ಸಮೂಹ ನೃತ್ಯ : (8 ವರ್ಷದಿಂದ 12 ವರ್ಷದ ಮಕ್ಕಳಿಗೆ) ನಿಯಮಗಳು. – ತಂಡದಲ್ಲಿ ಕನಿಷ್ಠ 6 ಗರಿಷ್ಠ 10 ಮಕ್ಕಳು ಇರಬೇಕು, ಹಾಡು ಕನ್ನಡದ್ದೇ ಆಗಿರಬೇಕು. ಸಮಯ 4 ನಿಮಿಷ , ಹೆಸರು ನೋಂದಣಿಗಾಗಿ ಸಂಪರ್ಕಿಸಿ, 7224875919 :ಅರ್ಪಿತಾ ಸಂದೀಪ್ ಭಟ್
ಜಾನಪದ ನೃತ್ಯ : ಪ್ರೌಢಶಾಲಾ ಮಕ್ಕಳಿಗೆ ಜಾನಪದ ಹಾಡು ಕಡ್ಡಾಯ, ಗುಂಪಿನಲ್ಲಿ ಕನಿಷ್ಠ 6 ಗರಿಷ್ಠ 8 ಮಕ್ಕಳು ಇರಬೇಕು ಸಮಯ : 5 ನಿಮಿಷ., ಹೆಸರು ನೋಂದಣಿಗಾಗಿ 9739323837-ಪದ್ಮಾವತಿ
ಚಿತ್ರಕಲೆ : ಪದವಿ ಪೂರ್ವ ವಿದ್ಯಾರ್ಥಿಗಳಿಗೆ : ಹಸಿರೇ ಉಸಿರು ಎನ್ನುವ ಶೀರ್ಷಿಕೆ ಗೆ ಅನುಗುಣವಾಗಿ ಚಿತ್ರ ಬಿಡಿಸಬೇಕು. ಸಮಯ : 1 ಗಂಟೆ ನೀಡಲಾಗುವುದು. ಹೆಸರು ನೋಂದಣಿಗಾಗಿ , ಅನಿತಾ ಪ್ರತಾಪ್ :8971680717
ಗಾಯನ ಸ್ಪರ್ಧೆ : ಪದವಿ ವಿದ್ಯಾರ್ಥಿಗಳಿಗೆ ಸಮೂಹ ಗಾಯನ ದೇಶಭಕ್ತಿ ಗೀತೆ ಅಥವಾ ನಾಡಗೀತೆ ಗುಂಪಿನಲ್ಲಿ ಕನಿಷ್ಠ 5 ಗರಿಷ್ಠ 10 ಮಂದಿ ಇರಬೇಕು.
ಸಮಯ 4 ನಿಮಿಷ., ಹೆಸರು ನೋಂದಣಿಗಾಗಿ ಗಿರಿಜಾಮಣಿ :9110657754
ಪದವಿ ಮಕ್ಕಳಿಗೆ ಪ್ರಬಂಧ ಸ್ಪರ್ಧೆ : ವಿಷಯ : ಮಾದಕ ವ್ಯಸನ ಮುಕ್ತ ಭಾರತ – ನನ್ನ ಕನಸು , ಸಮಯ 1 ಗಂಟೆ.
ಗಾಯನ ಸ್ಪರ್ಧೆ : ಮಹಿಳೆಯರಿಗೆ – ಯಾವುದೇ ಕನ್ನಡ ಹಾಡು ಹಾಡಬಹುದು., ಸಮಯ 4 ನಿಮಿಷ, ಸದಸ್ಯೆಯರ ಸಂಖ್ಯೆ ಕನಿಷ್ಠ 6 ಗರಿಷ್ಠ 10
ಹೆಸರು ನೋಂದಣಿಗಾಗಿ ಸಂಪರ್ಕಿಸಿ, ಚಿತ್ರಾ ಆರ್ಯನ್ : 9449044117, ಹೆಸರು ನೋಂದಾಯಿಸಲು ಅಕ್ಟೋಬರ್ 30 ಕೊನೆ ದಿನ. ಸ್ಪಧೆ೯ಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9663129670.