ಮಡಿಕೇರಿ ಅ.20 NEWS DESK : ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾಜ ಬಾಂಧವರನ್ನು ಬೆಸೆಯುವ ಬಹಳ ದೊಡ್ಡ ಶಕ್ತಿಯಿದೆ. ಈ ಸಾಮಥ್ಯ೯ವನ್ನು ಮಲಯಾಳಿ ಸಮಾಜದವರು ಸೂಕ್ತ ರೀತಿಯಲ್ಲಿ ಬಳಸಿಕೊಂಡಿದ್ದಾರೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ.ಶ್ಲಾಘಿಸಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಓಣಂಂ ಘೋಷಂ ಮತ್ತು ಓಣಂ ಸಧ್ಯ ಅಂಗವಾಗಿ ನಡೆದ ಕ್ರೀಡಾಸ್ಪಧೆ೯ಗಳನ್ನು ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕೊಡಗಿನಲ್ಲಿ ನೆಲಸಿರುವ ಹಿಂದೂ ಮಲಯಾಳಿ ಸಮುದಾಯದವರು ವ್ಯಾಪಾರ ವಿಸ್ತರಣೆಯ ಜತೆಗೇ ಸ್ಥಳೀಯರ ಜತೆ ಗೆಳೆತನ, ಮಾನವೀಯತೆ ಗುಣದ ವಿಸ್ತರಣೆಗೂ ಕಾರಣರಾಗಿದ್ದಾರೆ, ಹೀಗಾಗಿಯೇ ಮಲಯಾಳಿ ಸಮಾಜಬಾಂಧವರು ಸ್ಥಳೀಯರೊಂದಿಗೆ ಅನ್ಯೋನ್ಯತೆಯಿಂದ ಬದುಕು ಕಂಡುಕೊಳ್ಳುವಂತಾಗಿದೆ ಎಂದರು. ಸಮುದಾಯದ ಒಗ್ಗಟ್ಟಿನಲ್ಲಿ ಮುಖ್ಯ ಪಾತ್ರ ವಹಿಸುವ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಿಂದೂ ಮಲಯಾಳಿ ಸಮಾಜದ ಪ್ರಮುಖರು ಆದ್ಯತೆ ನೀಡುವ ಮೂಲಕ ತಮ್ಮ ಸಂಘವನ್ನು ಬಲಿಷ್ಟವಾಗಿಸಿರುವುದು ಮೆಚ್ಚುವಂಥ ಕಾಯ೯ ಎಂದು ಶ್ಲಾಘಿಸಿದ ಅನಿಲ್, ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದಭ೯, ಕೋವಿಡ್ ಲಾಕ್ ಡೌನ್ ಸಂದಭ೯ ಮಲಯಾಳಿ ಸಂಘದ ಸದಸ್ಯರ ನೆರವಿನ ಕಾಯ೯ ಸದಾ ಸ್ಮರಣೀಯ ಎಂದೂ ಹೇಳಿದರು. ಕೇರಳದ ಯುವಕನೋವ೯ ಕುಶಾಲನಗರದಲ್ಲಿ ಮೖತಪಟ್ಟ ಸಂದಭ೯ ಆತನ ತಾಯಿ ಕೇರಳದಲ್ಲಿ ಅಂತ್ಯಕ್ರಿಯೆ ಅಸಾಧ್ಯ ಎಂದು ತನ್ನ ದಯಾನೀಯತೆ ತೋಡಿಕೊಂಡಾಗ ಹಿಂದೂ ಮಲಯಾಳಿ ಸಂಘದವರೇ ಮನೆಯ ಸದಸ್ಯರಂತೆ ಅಂತ್ಯಕ್ರಿಯೆ ನಡೆಸುವ ಮೂಲಕ ಮಾನವೀಯತೆಯನ್ನು ಜೀವಂತವಾಗಿಸಿದ ಘಟನೆ ಎಲ್ಲಾ ಸಮಾಜದವರಿಗೂ ಮಾದರಿಯಾಗುವಂಥದ್ದು ಎಂದು ಹೆಮ್ಮೆಯಿಂದ ಅನಿಲ್ ನುಡಿದರು. ಶಕ್ತಿ ಪತ್ರಿಕೆಯ ಉಪಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ, ವಿವಿಧತೆಯಲ್ಲಿ ಏಕತೆಗೆ ನಿದಶ೯ನದಂತೆ ಕೊಡಗಿನಲ್ಲಿ ಎಲ್ಲಾ ಸಮಾಜ ಬಾಂಧವರು ಒಗ್ಗಟ್ಟಿನಿಂದ ಜೀವಿಸಿದ್ದಾರೆ, ಹಿಂದೂ ಮಲಯಾಳಿ ಸಂಘದ 11 ಶಾಖೆಗಳು ಕೊಡಗಿನಲ್ಲಿರುವುದು ಕೂಡ ಸಂಘದ ಬಲವಧ೯ನೆಗೆ ಕಾರಣವಾಗಿದೆ ಎಂದರು, ದ್ವೇಷಾಸೂಯೆಗಳಿಲ್ಲದೇ ಸಮಾಜದಲ್ಲಿ ಎಲ್ಲರೂ ಮಾದರಿಯಾಗಿ ಜೀವಿಸೋಣ ಎಂದೂ ಸಂತೋಷ್ ಹಾರೈಸಿದರು. ಹಿಂದೂ ಮಲಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ ಮಾತನಾಡಿ, ಕ್ರೀಡಾಕೂಟಗಳ ಮೂಲಕ ಸಮಾಜಭಾಂದವರು ಒಟ್ಟಿಗೆ ಸೇರಲು ಸೂಕ್ತ ವೇದಿಕೆಯಾಗಿದೆ ಎಂದರಲ್ಲದೇ ವೈನಾಡಿನಲ್ಲಿ ಸಂಭವಿಸಿದ ಪ್ರಕೖತ್ತಿ ವಿಕೋಪದ ಹಿನ್ನಲೆ ಈ ಬಾರಿ ಜಿಲ್ಲೆಯ ಅನೇಕ ಕಡೆ ಓಣಂ ಸಂಭ್ರಮವನ್ನು ಪ್ರತೀ ವಷ೯ದಂತೆ ಮಾಡಲಾಗಿಲ್ಲ ಎಂದು ಹೇಳಿದರು, ಮೊಬೈಲ್ ನಂದಾಗಿ ಇಂದಿನ ಸಮಾಜದಲ್ಲಿ ಸಂಬಂಧಗಳೇ ನಶಿಸುತ್ತಿದೆ, ಬಂಧುಬಾಂಧವರು ಮನೆಗಳಿಗೆ ತೆರಳುವ ಕ್ರಮವೇ ಮರೆಯಾಗುತ್ತಿದೆ, ಒಂದೇ ಮನೆಯಲ್ಲಿದ್ದುಕೊಂಡು ದೂರದೂರದಲ್ಲಿ ಕುಳಿತುಕೊಂಡು ಮೊಬೈಲ್ ಮೂಲಕ ಸಂವಹನ ಮಾಡುವ ವಿಚಿತ್ರ ಪರಿಸ್ಥಿತಿ ತಲೆದೋರಿದೆ, ಪರಸ್ಪರ ಕಷ್ಟ ಸುಖ ಕೇಳುವ ಪರಿಸ್ಥಿತಿಯಲ್ಲಿಯೂ ಬಂಧು ಬಳಗದವರಿಲ್ಲದಂಥ ಪರಿಸ್ಥಿತಿಯನ್ನು ನಾವೆಲ್ಲಾ ನಿಮಿ೯ಸಿಕೊಂಡಿದ್ದೇವೆ, ಇಂಥ ಸ್ಥಿತಿ ಮರೆಯಾಗಿ ಸಂಭಂಧಗಳ ಬೆಸುಗೆಗೆ ಕ್ರೀಡಾ, ಸಾಂಸ್ಕೖತಿಕ ಚಟುವಟಿಕಗಳಿಂದ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಓಣಂ ಆಚರಣಾ ಸಮಿತಿ ಅಧ್ಯಕ್ಷ ಟಿ.ಆರ್.ಸಂಚಾಲಕ ವಾಸುದೇವ್ ಮಾತನಾಡಿ , ಓಣಂ ಘೋಷಂ, ಓಣಂ ಸಧ್ಯದ ಮೂಲಕ ಹಿಂದೂ ಮಲಯಾಳಿ ಸಮಾಜದವರನ್ನು ಒಗ್ಗೂಡಿಸುವ ಕಾಯ೯ ಈ ವಷ೯ವೂ ಸದಸ್ಯರ ಸಹಕಾರದೊಂದಿಗೆ ಯಶಸ್ವಿಯಾಗಿದೆ ಎಂದು ಹಷ೯ ವ್ಯಕ್ತಪಡಿಸಿದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಟಿ.ಕೆ ಸುಧೀರ್ ಮಾತನಾಡಿ, ಉದ್ದೇಶಿತ ಗುರಿಯತ್ತ ಛಲ ಮತ್ತು ಆಸಕ್ತಿಯನ್ನು ಪ್ರತೀಯೋವ೯ರೂ ರೂಡಿಸಿಕೊಂಡರೆ ಯಶಸ್ಸು ಸುಲಭಸಾಧ್ಯ ಎಂದರು. ಹಿಂದೂ ಮಲಯಾಳಿ ಸಂಘದ ಮಡಿಕೇರಿ ಅಧ್ಯಕ್ಷ ಕೆ.ವಿ. ಧಮೇ೯ಂದ್ರ, ನಿದೇ೯ಶಕ ವಿನೋದ್ ನಾಯರ್ ಉಪಸ್ಥಿತರಿದ್ದ ಕಾಯ೯ಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ ಕೆ.ಎಸ್ .ರಮೇಶ್ ನಿರೂಪಿಸಿ ಹಿಮಾನಿ ವಿಜಯಕುಮಾರ್ ಪ್ರಾಥಿ೯ಸಿ, ಅಂಜಲಿ ಅಶೋಕ್ ಸ್ವಾಗತಿಸಿ, ಹೆಚ್. ಪಿ.ಅಶೋಕ್ ವಂದಿಸಿದರು. ಹಿಂದೂ ಮಲಯಾಳಿ ಸಂಘದ ಸದಸ್ಯರು, ಕುಟುಂಬಸ್ಥರಿಗೆ ಹಗ್ಗಜಗ್ಗಾಟ, ಕ್ರಿಕೆಟ್, ಆಟೋಟಗಳು ಸೇರಿದಂತೆ ವೈವಿಧ್ಯಮಯ ಸ್ಪಧೆ೯ ಆಯೋಜಿಸಲಾಗಿತ್ತು.