ವಿರಾಜಪೇಟೆ ಅ.29 NEWS DESK : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ವಿರಾಜಪೇಟೆ ತಾಲ್ಲೂಕು ಶಾಖೆಯ 2024-2029ನೇ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಸರಕಾರಿ ಪ್ರೌಢ ಶಾಲೆ ಮತಕ್ಷೇತ್ರದಿಂದ ರಾಘವೇಂದ್ರ ಸಿ.ಎಂ.ಅರಣ್ಯ ಇಲಾಖೆ ಮತಕ್ಷೇತ್ರದಿಂದ ಉಮಾಶಂಕರ್ ಎ.ಎಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಆಸ್ಪತ್ರೆ ಮತಕ್ಷೇತ್ರದಿಂದ ಲಲಿತಾ ಎ.ಬಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಳಿದ ಸಿಬ್ಬಂದಿಗಳು ಮತಕ್ಷೇತ್ರದಿಂದ ಎರಡು ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾರ್ಯಪ್ಪ ಎ.ಯು, ಲಲಿತಾ ಪಿ.ಎ ಅವರು ಸ್ಪರ್ಧಿಸಿ ಜಯಶೀಲರಾಗಿದ್ದಾರೆ. ಉಳಿದ ಇಲಾಖೆಗಳ ಮತಕ್ಷೇತ್ರಗಳಾದ ಕೃಷಿ ಇಲಾಖೆ ಮತಕ್ಷೇತ್ರದಿಂದ ಅಶ್ವಿನ್ ಕುಮಾರ್ ಹೆಚ್.ಬಿ, ಪಶುಪಾಲನಾ ಮತ್ತು ವೈದ್ಯ ಇಲಾಖೆ ಮತಕ್ಷೇತ್ರದಿಂದ ಸರ್ವರ್ ಪಾಷಾ, ಕಂದಾಯ ಇಲಾಖೆ ತಾಲೂಕು ಕಚೇರಿ ಮತಕ್ಷೇತ್ರದಿಂದ ಸೋಮಣ್ಣ ಕೆ.ಎಂ, ಕಂದಾಯ ಇಲಾಖೆ ಕ್ಷೇತ್ರ ಸಿಬ್ಬಂದಿಗಳು ಮತಕ್ಷೇತ್ರದಿಂದ ಹರೀಶ್ ಎಂ.ಎಲ್, ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಮತಕ್ಷೇತ್ರದಿಂದ ಸುಬ್ಬಯ್ಯ ಟಿ.ಪಿ, ಸರಕಾರಿ ಪ್ರಾಥಮಿಕ ಶಾಲೆಗಳು ಮತಕ್ಷೇತ್ರದಿಂದ ಸುರೇಂದ್ರ ಈ, ದೇವರಾಜ್ ಬಿ.ಟಿ, ರಮಾನಂದ ಟಿ.ಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಕಚೇರಿ ಮತಕ್ಷೇತ್ರದಿಂದ ಕುಶಾಲಪ್ಪ ಎಂ.ಎನ್, ಸರಕಾರಿ ಪದವಿಪೂರ್ವ ಕಾಲೇಜುಗಳು ಮತಕ್ಷೇತ್ರದಿಂದ ಚಾಲ್ರ್ಸ್ ಡಿಸೋಜ, ಪದವಿ ಕಾಲೇಜುಗಳು ಮತಕ್ಷೇತ್ರದಿಂದ ಡಾ.ದಯಾನಂದ ಕೆ.ಸಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಮತಕ್ಷೇತ್ರದಿಂದ ನಾಗರಾಜು ಹೆಚ್.ಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತಕ್ಷೇತ್ರದಿಂದ ಶಶಿಕಾಂತ್ ಎಂ.ಪಿ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ಮತಕ್ಷೇತ್ರದಿಂದ ಸಣ್ಣ ಜವರಯ್ಯ, ನ್ಯಾಯಾಂಗ ಇಲಾಖೆ ಮತಕ್ಷೇತ್ರದಿಂದ ಸ್ಟೀಫನ್ ಡಿಸೋಜ ಎಂ.ಎ, ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ ತಾಲೂಕು ಪಂಚಾಯತ್ ಕಚೇರಿ ಮತಕ್ಷೇತ್ರದಿಂದ ಗುರುರಾಜ್ ಬಿ.ಎಸ್, ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ ಉಳಿದ ಸಿಬ್ಬಂದಿಗಳು ಮತಕ್ಷೇತ್ರದಿಂದ ತಿಮ್ಮಯ್ಯ ಕೆ.ಎಂ, ಅಬಕಾರಿ ಮತ್ತು ವಾಣಿಜ್ಯ ತೆರಿಗೆಗಳ ಇಲಾಖೆ ಮತಕ್ಷೇತ್ರದಿಂದ ಸಂತೋಷ್, ಇತರ ಇಲಾಖೆ ಪರಿಷಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಮತಕ್ಷೇತ್ರದಿಂದ ಬಸವರಾಜು ಎನ್.ಎಸ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ವಿರಾಜಪೇಟೆ ತಾಲೂಕು ಶಾಖೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.