ಮಡಿಕೇರಿ ಅ.29 NEWS DESK : ಸಮಥ೯ ಕನ್ನಡಿಗರು ಸಂಸ್ಥೆಯ ಕೊಡಗು ಜಿಲ್ಲಾ ಘಟಕದಿಂದ ನ.3 ರಂದು ಮಡಿಕೇರಿಯ ಓಂಕಾರ ಸದನದಲ್ಲಿ ನಿಮ್ಮ ಪ್ರತಿಭೆ – ನಮ್ಮ ವೇದಿಕೆ ಕಾಯ೯ಕ್ರಮ ಆಯೋಜಿಸಲಾಗಿದ್ದು, ಈ ಸಂದಭ೯ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನದ ಗೌರವಾಪ೯ಣೆ ನೆರವೇರಲಿದೆ ಎಂದು ಸಮಥ೯ ಕನ್ನಡಿಗರು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷ್ಮಿ ಮಾಹಿತಿ ನೀಡಿದ್ದಾರೆ.
ಈ ವಷ೯ ಸಮಥ೯ ಕನ್ನಡಿಗರು ಸಂಸ್ಥೆಯಿಂದ ಸನ್ಮಾನಕ್ಕೆ ಭಾಜನರಾದವರು :: ಟಿ.ಪಿ ರಮೇಶ್ ( ಸಾಹಿತ್ಯ ಸಂಘಟನೆ) , ಕುಂಡ್ಯೊಳಂಡ ದಿನೇಶ್ ಕಾಯ೯ಪ್ಪ (ಕ್ರೀಡಾ ಸಂಘಟನೆ) ಆರ್ .ಕೆ ಬಾಲಚಂದ್ರ ( ಕನ್ನಡದಲ್ಲಿ ಬ್ಯಾಂಕಿಂಗ್ ಮಾಗ೯ದಶ೯ನ) ಅರುಣ್ ಶೆಟ್ಟಿ (ಸಮಾಜಸೇವೆ) , ತೇಲಪಂಡ ಆರತಿ ಸೋಮಯ್ಯ (ಶಿಕ್ಷಣ), , ನಿಖಿಲ್ ರಾಮಮೂತಿ೯ ( ಬಿದಿರು ಕೖಷಿ), ಚಿತ್ರಾ ಆಯ೯ನ್ (ಸಂಗೀತ), ಸಂಗೀತ ರವಿರಾಜ್ (ಸಾಹಿತ್ಯ), ಎಸ್ ಕೆ ಲಕ್ಷ್ಮೀಶ್ (ಮಾಧ್ಯಮ), ಓಬಳಿ (ಪೌರಸೇವೆ) ಬೆಂಗಳೂರಿನ ಲಕ್ಷ್ಮಿ ಲಿಂಗೇಶ್ (ಸಮಾಜಮುಖಿ ಕಾಯ೯) ನ.3 ರಂದು ಬೆಳಗ್ಗೆ 10 ಗಂಟೆಗೆ ಆಯೋಜಿತ ಸಭಾಕಾಯ೯ಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಜಾನಪದ ಪರಿಷತ್ ಖಜಾಂಜಿ ಎಸ್.ಎಸ್ ಸಂಪತ್ ಕುಮಾರ್ ಉದ್ಘಾಟಿಸಲಿದ್ದಾರೆ, ವೈದ್ಯ ಸಾಹಿತಿ ಡಾ, ಕುಶ್ವಂತ್ ಕೋಳಿಬೈಲು, ಸಮಥ೯ ಕನ್ನಡಿಗರು ಸಂಸ್ಥೆಯ ರಾಜ್ಯಾಧ್ಯಕ್ಷ ಲಿಂಗೇಶ್ ಹುಣಸೂರು, ಪಾಲ್ಗೊಳ್ಳಲಿದ್ದಾರೆ. ತರುವಾಯ ನಡೆಯುವ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಆನಂದ್ ದೆಗ್ಗನಹಳ್ಳಿ ವಹಿಸಲಿದ್ದು, ಕವಿಗೋಷ್ಟಿಯಲ್ಲಿ ಬಿ.ಜಿ ಅನಂತಶಯನ, ಗಿರೀಶ್ ಕಿಗ್ಗಾಲು, ಡಾ.ಸತೀಶ್, ಸಂಗೀತಾ ರವಿರಾಜ್, ರಂಜಿತ್ ಕವಲಪಾರ, ಕೃಪಾ ದೇವರಾಜ್, ಶ್ವೇತಾರವೀಂದ್ರ, ಹೇಮಂತ್ ಪಾರೇರ, ಸಹನಾ ಕಾಂತಬೈಲು, ಹರಿಣಿ ವಿಜಯ್, ಹೇಮಂತ್, ಹೆರೂರು, ಶ್ವೇತಾ ರವೀಂದ್ರ, ವಿನೋದ್ ಮೂಡಗದ್ದೆ ಪಾಲ್ಗೊಳ್ಳಲಿದ್ದಾರೆ. ಸಂಜೆ 3.30 ಗಂಟೆಗೆ ಲಿಂಗೇಶ್ ಹುಣಸೂರು ಅಧ್ಯಕ್ಷತೆಯಲ್ಲಿ ಆಯೋಜಿತ ಸಾಧಕರಿಗೆ ಸನ್ಮಾನ ಮತ್ತು ಸಮಾರೋಪ ಕಾಯ೯ಕ್ರಮದಲ್ಲಿ ಸನ್ಮಾನವನ್ನು ಹಿರಿಯ ಲೇಖಕಿ ರಾಜಲಕ್ಷ್ಮಿ ಗೋಪಾಲಕೖಷ್ಣ ನೆರವೇರಿಸಲಿದ್ದು, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ, ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಪ್ರಧಾನ ಕಾಯ೯ದಶಿ೯ ಅಂಬೆಕಲ್ ನವೀನ್, ಮಡಿಕೇರಿ ಎಲ್ ಐಸಿ ಯ ಶಾಖಾಧಿಕಾರಿ ದೀಪಕ್ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಅಂದು ಜಾನಪದ ನೖತ್ಯ, ಕನ್ನಡ ನೖತ್ಯ, ಸಮೂಹಗಾಯನ, ಪ್ರಬಂಧ, ಚಿತ್ರಕಲಾ ಸ್ಪಧೆ೯ಗಳು ಆಯೋಜಿತವಾಗಿದೆ ಎಂದೂ ಸಂಸ್ಥೆಯ ಸಂಚಾಲಕಿ ಕೆ ಜಯಲಕ್ಷ್ಮಿ ಮಾಹಿತಿ ನೀಡಿದ್ದಾರೆ.