ಮೈಸೂರು NEWS DESK ನ.1 : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ತಾರಾಲಯಕ್ಕೆ ಇಂದು ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ಕಾಸ್ಮೊಸ್ ಯೋಜನೆಯ ಪ್ರಗತಿಯನ್ನು ಪರಾಮರ್ಶಿಸಿದರು. ಈ ಅತ್ಯಾಧುನಿಕ ಸೌಲಭ್ಯವನ್ನು ಭಾರತೀಯ ಖಗೋಳ ವಿಜ್ಞಾನ ಸಂಸ್ಥೆ ನಿರ್ಮಿಸಿದ್ದು, ಇದು ವಿಶ್ವದ ಮೊದಲ ಗುಮ್ಮಟಾಕಾರದ ಎಲ್.ಇ.ಡಿ ಪ್ಲಾನೆಟೋರಿಯಮ್ ನ ನೆಲೆಯಾಗಿದೆ. ಈ ಪ್ಲಾನಿಟೋರಿಮ್ ನಿರ್ಮಾಣಗೊಳ್ಳುತ್ತಿರುವ ಸ್ಥಳವನ್ನು ಯದುವೀರ್ ಅವರ ತಾತನವರಾದ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಬಳುವಳಿಯಾಗಿ ನೀಡಿದ್ದು ಪ್ರಸ್ತುತ ಇದನ್ನು ಶ್ರೀ ಜಯಚಾಮರಾಜ ಉನ್ನತ ಶಿಕ್ಷಣ ಕೇಂದ್ರ ಎಂದು ಕರೆಯಲಾಗುತ್ತದೆ. ಈ ಕಾಸ್ಮೊಸ್ ಸೆಂಟರ್ ಶಿಕ್ಷಣ, ತರಬೇತಿ, ಉನ್ನತ ಕೌಶಲ್ಯವನ್ನು ಸಬಲೀಕರಣಗೊಳಿಸಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಉನ್ನತ-ತಂತ್ರಜ್ಞಾನದ ಕೇಂದ್ರವಾಗಿ ರ್ಯನಿರ್ವಹಿಸುತ್ತದೆ. ಕೇಂದ್ರದ ಗೌರವಾನ್ವಿತ ವಿತ್ತ ಸಚಿವರಾದ ಶ್ರೀಮತಿ ನಿರ್ಮಾಣ ಸೀತಾರಾಮನ್ ಅವರ ಬೆಂಬಲದಿಂದ ಈ ದೂರದರ್ಶಿತ್ವದ ಯೋಜನೆಯನ್ನು ಕಾರ್ಯರೂಪಗೊಳಿಸಲಾಗುತ್ತಿದೆ.










