ಭಾಗಮಂಡಲ NEWS DESK ನ.1 : ಭಾಗಮಂಡಲದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಪ್ರಾಂಶುಪಾಲ ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಭಾಗಮಂಡಲ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುನೀಲ್ ಪತ್ರವೋ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ, ಕುಂದಚೇರಿ ಪಂಚಾಯಿತಿ ಸದಸ್ಯ ಹಾರಿಸ್, ಕುಯ್ಯಮುಡಿ ಮನೋಜ್, ನಿಲಯ ಪಾಲಕ ದೀಪಕ್ ಕೆ.ಕೆ, ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಬೆಳಗ್ಗೆ ಶಾಲೆಯ ವತಿಯಿಂದ ತಾಯಿ ಭುವನೇಶ್ವರಿ ದೇವಿಯ ಕಲಾಕೃತಿಯೊಂದಿಗೆ ಆಕರ್ಷಕ ಜಾಥಾ ನಡೆಯಿತು. ಕನ್ನಡ ಶಿಕ್ಷಕ ರಘು ನಿರೂಪಿಸಿದರು. ಭಾಗಮಂಡಲ ವಿನಾಯಕ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಸಿಹಿ ಹಂಚಲಾಯಿತು.












