ಮಡಿಕೇರಿ NEWS DESK ನ.1 : ಮಡಿಕೇರಿ ನಗರದ ಓಂಕಾರ್ ಆಟೋ ಚಾಲಕರ ಸಂಘದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಿರಿಯರಾದ ಬಿ.ಬಿ.ಮಾದಮ್ಮಯ್ಯ, ಗೌರಮ್ಮ ದಂಪತಿ ಹಾಗೂ ಓಂಕಾರ್ ಜನರೇಟರ್ಸ್ ನ ಮಾಲೀಕ ತಿಮ್ಮಯ್ಯ ಅವರು ಧ್ವಜಾರೋಹಣದ ನಂತರ ಕನ್ನಡ ಸಂದೇಶ ನೀಡಿದರು. ಸಂಘದ ಪದಾಧಿಕಾರಿಗಳಾದ ಯತೀಶ್, ವಿಜಯ್, ಸುನಿಲ್, ಆದಿ, ಕಾರ್ತಿಕ್, ಮೋಹನ್, ಸುಂದರ್, ಹರ್ಷಿತ್, ಹೇಮರಾಜ್, ಬಡೆಸಾಹೇಬ್ ಮತ್ತಿತರರು ಹಾಜರಿದ್ದು ಸಿಹಿಹಂಚಿ ಸಂಭ್ರಮಿಸಿದರು.










