ಮಡಿಕೇರಿ ನ.15 NEWS DESK : ನಂಜರಾಯಪಟ್ಟಣದ ದುಬಾರೆ ಸಾಕಾನೆ ಶಿಬಿರಕ್ಕೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿದರು. ಗ್ರಾಮಸ್ಥರು ಆರತಿ ಬೆಳಗಿ ಸಂಸದರನ್ನು ಬರಮಾಡಿಕೊಂಡರು. ಈ ಸಂದರ್ಭ ಆನೆ ಮಾವುತರ ಆಹವಾಲುಗಳನ್ನು ಆಲಿಸಿದ ಸಂಸದರು, ವಿವಿಧ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿದರು.












