ಮಡಿಕೇರಿ NEWS DESK ನ.16 : ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕರಾದ ಬೊಳ್ಳಮ್ಮ ಪಿ.ಕೆ ಅವರು ಮಂಡಿಸಿದ “Status of news consumption with the advent of mobile based news distribution a study in Kodagu District” (ಮೊಬೈಲ್ ಆಧಾರಿತ ಸುದ್ದಿ ವಿತರಣೆಯ ಆರಂಭದೊ0ದಿಗೆ ಸುದ್ದಿ ಬಳಕೆಯ ಸ್ಥಿತಿಗತಿ : ಕೊಡಗು ಜಿಲ್ಲೆಯಲ್ಲೊಂದು ಅಧ್ಯಯನ) ಎಂಬ ಪ್ರೌಢಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್ ಡಿ ನೀಡಿದೆ. ಬೊಳ್ಳಮ್ಮ ಅವರಿಗೆ ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಹ ಪ್ರಾಧ್ಯಾಪಕರಾದ, ಡಾ.ಶ್ರೀಪತಿ ಟಿ. ಅವರು ಮಾರ್ಗದರ್ಶನ ಮಾಡಿದರು.









