ಮಡಿಕೇರಿ NEWS DESK ನ.17 : ಮಕ್ಕಳ ದಿನಾಚರಣೆಯ ಪ್ರಯುಕ್ತ ಮಡಿಕೇರಿ ನಗರದ ಮಹದೇವಪೇಟೆಯ ಎಸ್‌ಎಸ್ ಆಸ್ಪತ್ರೆ ವತಿಯಿಂದ ಎಲ್‌ಕೆಜಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಿತು.
ಆಸ್ಪತ್ರೆಯ ಸಮೀಪದಲ್ಲಿರುವ ಕ್ರೆಸೆಂಟ್ ಸ್ಕೂಲ್ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ತಮ್ಮ ಕಲ್ಪನೆಯ ಚಿತ್ರಕಲಾ ಪ್ರತಿಭೆಗೆ ಸಾಕ್ಷಿಯಾದರು. ಮೂರು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಬಹುಮಾನಕ್ಕಾಗಿ ಸ್ಪರ್ಧಿಗಳು ತೀವ್ರ ಪೈಪೋಟಿ ನೀಡಿದರು. ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಎಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಶಿಲ್ಪ ಸತೀಶ್, ಮಕ್ಕಳು ಆರೋಗ್ಯವಂತರಾಗಿ ಲವಲವಿಕೆಯಿಂದಿರಲು ಈ ರೀತಿಯ ಕ್ರಿಯಾಶೀಲತೆಯ ಸ್ಪರ್ಧೆಗಳ ಅಗತ್ಯವಿದೆ. ಇದೇ ಕಾರಣದಿಂದ ಆಸ್ಪತ್ರೆಯ ವತಿಯಿಂದ ಪ್ರತಿವರ್ಷ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಇದನ್ನು ಮುಂದಿನ ವರ್ಷಗಳಲ್ಲಿ ಮತ್ತಷ್ಟು ಅರ್ಥಪೂರ್ಣಗೊಳಿಸಲಾಗುವುದು ಎಂದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ.ದೇವದಾಸ್, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕಲು ಚಿತ್ರಕಲಾ ಸ್ಪರ್ಧೆ ಸೂಕ್ತವಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲೂ ಆಯೋಜಿಸುವಂತ್ತಾಗಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನಗರಸಭೆಯ ಮಾಜಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್, ಮಕ್ಕಳು ಸದಾ ಕ್ರಿಯಾಶೀಲರಾಗಿರಲು ಈ ರೀತಿಯ ಸ್ಪರ್ಧೆಗಳು ಹೆಚ್ಚು ಸಹಕಾರಿಯಾಗಿದೆ. ವಿದ್ಯಾರ್ಥಿಗಳ ಪ್ರತಿಭೆಗೆ ಸ್ಫೂರ್ತಿ ತುಂಬಲು ಸ್ಪರ್ಧಾ ವೇದಿಕೆಗಳು ಅಗತ್ಯವೆಂದರು. ಪ್ರಾಸ್ತಾವಿಕ ಭಾಷಣ ಮಾಡಿದ ವೈದ್ಯಾಧಿಕಾರಿ ಡಾ.ಸತೀಶ್ ಶಿವಮಲ್ಲಯ್ಯ, 2ನೇ ವರ್ಷದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪರಿಸರ, ಪರಿಸರ ಸಂರಕ್ಷಣೆ, ಹಳ್ಳಿಯ ಜೀವನ, ಹಳ್ಳಿಯ ಪರಿಸರ, ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯ ವಿಷಯವನ್ನಾಧರಿಸಿ ಚಿತ್ರ ಬಿಡಿಸಲು ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಹೆಚ್ಚು ಆಸಕ್ತಿಯಿಂದ ಪಾಲ್ಗೊಂಡು ತಮ್ಮ ಕಲ್ಪನೆಯ ಮೂಲಕ ಡಾ.ಪ್ರಿಯದರ್ಶಿನಿ ಹಾಗೂ ಡಾ.ಶ್ವೇತ ಅವರು ನೀಡಿದ ಈ ವಿಷಯಗಳಿಗೆ ಜೀವ ತುಂಬಿದ್ದಾರೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕ್ರಿಯಾಶೀಲತೆಗೆ ಒತ್ತು ನೀಡಿ ಮಾನವೀಯ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸುವ ವಿಷಯಗಳನ್ನು ನೀಡುವುದಾಗಿ ಹೇಳಿದರು. ಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಪ್ರದೀಪ್ ಕುಮಾರ್ ಕೆ.ಎಸ್ ಸ್ವಾಗತಿಸಿ, ತೇಜಸ್ ಡಿ.ಸಿ ನಿರೂಪಿಸಿ, ಕವಿತಾ ಪ್ರದೀಪ್ ವಂದಿಸಿದರು. ವಿದ್ಯಾರ್ಥಿಗಳಿಂದ ನಡೆದ ಗಾಯನ ಮತ್ತು ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು. ದಿಲೀಪ್, ಪವನ್ ವಸಿಷ್ಠ, ಕಿರಣ್ ಕುಂದಾಪುರ ಹಾಗೂ ಗಿರಿ ಅಪ್ಪಯ್ಯ ಅವರು ತೇಜಸ್ ಅವರ ನಿರೂಪಣೆಯಲ್ಲಿ ನಡೆಸಿಕೊಟ್ಟರು. ತೀರ್ಪುಗಾರರಾಗಿ ಮ್ರಿಣಾಲಿನಿ ಚಿಣ್ಣಪ್ಪ ಪಾಲ್ಗೊಂಡಿದ್ದರು.
::: ಬಹುಮಾನ ವಿಜೇತರು :::
“ವರ್ಣರಂಜಿತ ಉದ್ಯಾನವನ”, ವಿಷಯಾಧಾರಿತ ಮೊದಲನೇ ವಿಭಾಗದಲ್ಲಿ (ಎಲ್‌ಕೆಜಿಯಿಂದ 1ನೇ ತರಗತಿ) ಪ್ರಥಮ ಮಡಿಕೇರಿಯ ಯುರೋ ಕಿಡ್ಸ್ ನ ಯುಕೆಜಿಯ ಬ್ರಿಯಾ (ರೂ.2ಸಾವಿರ), ದ್ವಿತೀಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ನ ಆರುಷ್ ಜೆ.ಕೆ (ರೂ.1500), ತೃತೀಯ ಎಎಲ್‌ಜೆ ಕ್ರೆಸೆಂಟ್ ಸ್ಕೂಲ್ ನ 1ನೇ ತರಗತಿಯ ರಾಯನ್ ಆಲಂ (ರೂ.1000), ವಿಶೇಷ ಬಹುಮಾನ ಮಡಿಕೇರಿಯ ಸಂತ ಜೋಸೆಫರ ಶಾಲೆಯ ಯುಕೆಜಿಯ ಜಗನ್ ರಾವ್ (ರೂ.1000).
“ಗ್ರಾಮ ಜೀವನ, ಹಳ್ಳಿಯ ಸೊಬಗು” ವಿಷಯಾಧಾರಿತ 2ನೇ ವಿಭಾಗದಲ್ಲಿ (2ನೇ ತರಗತಿಯಿಂದ 6ನೇ ತರಗತಿ) ಪ್ರಥಮ ಮಡಿಕೇರಿಯ ಸಂತ ಜೋಸೆಫರ ಶಾಲೆಯ ರಚಿತಾ ವೈ.ಎಚ್ (ರೂ.3500), ದ್ವಿತೀಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ನ ಕೆ.ಟಿ.ಸ್ವರಿತ್ ಚಿಣ್ಣಪ್ಪ (ರೂ.3000), ತೃತೀಯ ಗೋಣಿಕೊಪ್ಪ ಲಯನ್ಸ್ ಸ್ಕೂಲ್ ನ ಪೌನಿ ಪೂವಮ್ಮ (ರೂ.2500), ವಿಶೇಷ ಬಹುಮಾನ ಕರಿಕೆ ಶಾಲೆಯ 4ನೇ ತರಗತಿಯ ನಿಶ್ಮಿತಾ (ರೂ.1000).
“ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯ” ವಿಷಯಾಧಾರಿತ 3ನೇ ವಿಭಾಗದಲ್ಲಿ (7ನೇ ತರಗತಿಯಿಂದ 10ನೇ ತರಗತಿ) ಪ್ರಥಮ ಮಡಿಕೇರಿಯ ಸಂತ ಜೋಸೆಫರ ಶಾಲೆಯ 9ನೇ ತರಗತಿಯ ಹರ್ಷಿತ್ ಚಿಣ್ಣಪ್ಪ (ರೂ.5ಸಾವಿರ), ದ್ವಿತೀಯ ವಿರಾಜಪೇಟೆಯ ಸಂತ ಆನ್ಸ್ ಶಾಲೆಯ 8ನೇ ತರಗತಿಯ ಅಮೃತ (ರೂ.4500), ತೃತೀಯ ಮಡಿಕೇರಿಯ ಸಂತ ಮೈಕಲರ ಶಾಲೆಯ 7ನೇ ತರಗತಿಯ ಸಚಿನ್ (ರೂ.4ಸಾವಿರ), ವಿಶೇಷ ಬಹುಮಾನ ಹಟ್ಟಿಹೊಳೆಯ ನಿರ್ಮಲ ವಿದ್ಯಾಭವನ ಶಾಲೆಯ ಹಫೀಝ್ ಎಂ.ಬಿ (ರೂ.1000)
ಈ ಎಲ್ಲಾ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಚಿತ್ರಕಲಾ ಸ್ಪರ್ಧೆಯ ಪ್ರತಿ ಗುಂಪಿನಲ್ಲಿ ವಿಶೇಷ ಮತ್ತು ಸಮಾಧಾನಕರ ಬಹುಮಾನ ನೀಡಲಾಯಿತು.
Breaking News
- *ಗುಡ್ಡೆಹೊಸೂರು : ರಾಷ್ಟ್ರೀಕೃತ ಬ್ಯಾಂಕ್ ಮಾದರಿಯ ಡಿಜಿಟಲೀಕರಣ ವ್ಯವಸ್ಥೆ ಸಹಕಾರಿ ಕ್ಷೇತ್ರದ ಬ್ಯಾಂಕಿಂಗ್ ನಲ್ಲೂ ಅತ್ಯಗತ್ಯ : ಎಂ.ಎಂ.ಶ್ಯಾಮಲ*
- *ರಾಷ್ಟ್ರೀಯ ಸಬ್ ಜೂನಿಯರ್ ಮಹಿಳಾ ಹಾಕಿ ತಂಡದ ಸೆಂಟರ್ ಫಾರ್ವರ್ಡ್ ಆಗಿ ಮಡಿಕೇರಿಯ ಅಕ್ಷರ*
- *ಸೋಮವಾರಪೇಟೆ : ಅಪ್ಪು ಅಭಿಮಾನಿಗಳ ಬಳಗದಿಂದ ಸಂಭ್ರಮದ ಮಕ್ಕಳ ದಿನಾಚರಣೆ : ಹಲವು ಸಾಧಕರಿಗೆ ಸನ್ಮಾನ*
- *ನಿಧನ ಸುದ್ದಿ*
- *ಮಡಿಕೇರಿ ಅಂಗನವಾಡಿಯಲ್ಲಿ ಬಾಲಮೇಳದಲ್ಲಿ ಮಿಂಚಿದ ಪುಟಾಣಿಗಳು*
- *ಮಡಿಕೇರಿಯ ಎಸ್‌ಎಸ್ ಆಸ್ಪತ್ರೆಯಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ : ಕಲಾಪ್ರತಿಭೆಗೆ ಸಾಕ್ಷಿಯಾದ ವಿದ್ಯಾರ್ಥಿಗಳು*
- *ಮಡಿಕೇರಿಯ ಹಿಂದೂಸ್ತಾನಿ ಶಾಲೆ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ : ಮಕ್ಕಳಲ್ಲಿ ದೇಶದ ಭವ್ಯ ಭವಿಷ್ಯ ಕಂಡ ನೆಹರು*
- *ಕೊಡಗು ಜಿಲ್ಲೆಯಲ್ಲಿ 13 ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್*
- *ಹುದ್ದೆಗಳ ಭರ್ತಿಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್ ಭರವಸೆ*
- *ಕುಶಾಲನಗರ ಗಣಪತಿ ದೇವಾಲಯಕ್ಕೆ ಉದ್ಯಮಿಗಳು ಹಾಗೂ ಟಿಬೆಟಿಯನ್ ಕುಟುಂಬದಿಂದ ಬೆಳ್ಳಿ ಕವಚ ಮತ್ತು ಪೂಜಾ ಸಾಮಾಗ್ರಿ ವಿತರಣೆ*