ಮಡಿಕೇರಿ NEWS DESK ನ.17 : ಮಡಿಕೇರಿ ಕಾಲೇಜು ಬಳಿಯ ಅಂಗನವಾಡಿ ಕೇಂದ್ರದಲ್ಲಿ ನಡೆದ “ಬಾಲಮೇಳ”ದಲ್ಲಿ ವಿವಿಧ ವೇಷಧಾರಿಗಳಾಗಿ ಪುಟಾಣಿಗಳು ಮಿಂಚಿದರು. ರಾಧೆ, ಕೃಷ್ಣ, ಕೊಡವತಿ, ಆಂಜನೇಯ, ಶಕುಂತಲೆ, ಜೇನುನೊಣ, ಸೈನಿಕ, ಹುಲಿ, ಒನಕೆ ಓಬವ್ವ, ಪ್ರಿನ್ಸೆಸ್, ಗಾಂಧೀಜಿ, ನೆಹರು ವೇಷತೊಟ್ಟು ಗಮನ ಸೆಳೆದರು. ಹಳೆಯ ವಿದ್ಯಾರ್ಥಿಗಳಾದ ಚರಿಷ್ಮಾ ಹಾಗೂ ಚಶ್ಮಿತಾ ಅವರಿಂದ ನಡೆದ ನೃತ್ಯ ಕಾರ್ಯಕ್ರಮ ಆಕರ್ಷಿಸಿತು. ಅಂಗನವಾಡಿ ಕಾರ್ಯಕರ್ತೆ ನೀತು ಹಾಗೂ ಸಹಾಯಕಿ ದಿವ್ಯ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದರು. ಅಂಗನವಾಡಿ ಕೇಂದ್ರವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಟರಾಜು ಈ ರೀತಿಯ ಕಾರ್ಯಕ್ರಮಗಳು ಮಕ್ಕಳ ಕೌಶಲ್ಯವನ್ನು ಹೆಚ್ಚಿಸುತ್ತದೆ, ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕರಿಸುತ್ತದೆ, ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ತಿಳಿಸಿದರು. ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಪೊಲೀಸ್ ಇಲಾಖೆಯ ಚಕ್ರಶಾಲಿ, ಮಾನ್ಯತ್, ಅಲಂಕಾರಕ್ಕೆ ಸಹಕರಿಸಿದ ಭರತ್, ಬಾಲ ವಿಕಾಸ ಸಮಿತಿಯ ಸದಸ್ಯರಾದ ಮೀನಾ ಹಾಜರಿದ್ದರು. ಎಲ್ಲಾ ಮಕ್ಕಳಿಗೆ ಬಹುಮಾನ, ಪ್ರಶಸ್ತಿ ಪತ್ರ, ಸಿಹಿ ತಿಂಡಿಗಳನ್ನು ವಿತರಿಸಲಾಯಿತು. ::: ಉಡುಗೊರೆ ನೀಡಿದ ಪೋಷಕರು ::: ವಿಯೊನ ದೇಚಕ್ಕ ಮಗುವಿನ ಪೋಷಕರು ಅಂಗನವಾಡಿ ಕೇಂದ್ರಕ್ಕೆ ದೊಡ್ಡ ಗಡಿಯಾರವನ್ನು ಉಡುಗೊರೆಯಾಗಿ ನೀಡಿದರು.









