ನವದೆಹಲಿ NEWS DESK ನ.20 : ಬ್ರೆಜಿಲ್‌ನಲ್ಲಿ ಭಾರತೀಯ ಸಂಸ್ಕೃತಿ ಅನಾವರಣಗೊಂಡಿತು. ವೇದಾಂತ ಮತ್ತು ಸಂಸ್ಕೃತವನ್ನು ಪಸರಿಸಲು ಮೀಸಲಾಗಿರುವ ಬ್ರೆಜಿಲಿಯನ್ ಸಂಸ್ಥೆಯಾದ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ರಾಮಾಯಣದ ಆಕರ್ಷಕ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಿಸಿದರು.












