ಮಡಿಕೇರಿ ನ.27 NEWS DESK : ಕ್ರಿಸ್ಮಸ್ ಉತ್ಸವದ ಅಂಗವಾಗಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಕುಶಾಲನಗರ ತಾಲ್ಲೂಕು ಘಟಕ ಹಾಗೂ ಕೂಡಿಗೆ ಪವಿತ್ರ ದೇವಾಲಯದ ಸಹಯೋಗದಲ್ಲಿ ಡಿ.1 ರಂದು ಜಿಲ್ಲಾ ಮಟ್ಟದ ಕ್ರಿಸ್ಮಸ್ ಕರೋಲ್ ಗಾಯನ ಸ್ಪರ್ಧೆ ನಡೆಯಲಿದೆ. ಕೂಡಿಗೆ ಆಂಜೆಲಾ ವಿದ್ಯಾನಿಕೇತನ ಆವರಣದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಿಧಾನ ಪರಿಷತ್ತು ಶಾಸಕ ಐವಾನ್ ಡಿಸೋಜ ಉದ್ಘಾಟಿಸಲಿದ್ದು, ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಮಹಾ ಧರ್ಮಾಧ್ಯಕ್ಷ ಡಾ.ಬರ್ನಾಡ್ ಮೊರಸ್ ದಿವ್ಯ ಸಾನಿಧ್ಯ ವಹಿಸಿ, ಆರ್ಶೀವಚನ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕುಶಾಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎ.ಪೀಟರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ವಲಯ ಶ್ರೇಷ್ಠ ಗುರು ವಂ.ಸ್ವಾಮಿ ಜಾರ್ಜ್ ದೀಪಕ್, ಕೂಡಿಗೆ ಪವಿತ್ರ ಕುಟುಂಬ ದೇವಾಲಯದ ಧರ್ಮಗುರು ವಂ.ಸ್ವಾಮಿ ಚಾಲ್ರ್ಸ್ ನೊರೋನ್ಹ, ಕುಶಾಲನಗರ ಸಂತ ಸೆಬಾಸ್ಟಿಯನ್‍ರ ದೇವಾಲಯದ ಧರ್ಮಗುರು ವಂ.ಸ್ವಾಮಿ ಎಂ.ಮಾರ್ಟಿನ್, ಕೂಡಿಗೆ ಆಂಜೆಲಾ ವಿದ್ಯಾನಿಕೇತನ ಸುಪೀರಿಯರ್ ಸಿಸ್ಟರ್ ರೇಖಾ, ಕುಶಾಲನಗರ ಹೋಲಿ ಸ್ಪಿರಿಟ್ ಕಾನ್ವಂಟ್ ಸುಪೀರಿಯರ್ ಸಿಸ್ಟರ್ ಸ್ಪಂದನ, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ, ಪ್ರಧಾನ ಕಾರ್ಯದರ್ಶಿ ಜೂಡಿ ವಾಸ್, ಉಪಾಧ್ಯಕ್ಷ ಎ.ಜಿ.ಯೇಸುದಾಸ್, ಸೋಮವಾರಪೇಟೆ ಉಪಾಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಪಾಲ್ಗೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಅವರ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಗೌರವಾನ್ವಿತ ಅತಿಥಿಗಳಾಗಿ ವಿರಾಜಪೇಟೆ ವಲಯ ಶ್ರೇಷ್ಠ ಗುರು ವಂ.ಸ್ವಾಮಿ ಜೇಮ್ಸ್ ಡೊಮಿನಿಕ್, ಸುಂಟಿಕೊಪ್ಪ ಸಂತ ಅಂಥೋಣಿ ದೇವಾಲಯದ ಧರ್ಮಗುರು ವಂ.ಸ್ವಾಮಿ ವಿಜಯಕುಮಾರ್, ಹಟ್ಟಿಹೊಳೆ ಹೋಲಿ ರೋಸರಿ ದೇವಾಲಯದ ಧರ್ಮಗುರು ವಂ.ಸ್ವಾಮಿ ಗಿಲ್ಬರ್ಟ್ ಡಿಸಿಲ್ವ, ಕೂಡಿಗೆ ಪವಿತ್ರ ದೇವಾಲಯದ ಧರ್ಮಗುರು ಚಾಲ್ರ್ಸ್ ನೊರೋನ್ಹ, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿ.ಎಸ್.ಸಜಿ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಗೌರವಾಧ್ಯಕ್ಷ ಜೋಕಿಂ ವಾಸ್, ನಿಕಟ ಪೂರ್ವ ಅಧ್ಯಕ್ಷ ಎಸ್.ಎಂ.ಡಿಸಿಲ್ವ, ಕಾರ್ಯಾಧ್ಯಕ್ಷ ವಿ.ಎ.ಲಾರೆನ್ಸ್, ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಫಿಲಿಪ್ ವಾಸ್, ವಿರಾಜಪೇಟೆ ಘಟಕದ ರಾಬಿನ್ ಅಂತೋಣಿ, ಸೋಮವಾರಪೇಟೆ ಘಟಕದ ಡೆನ್ಜಿಲ್ ವರ್ಗೀಸ್, ಮಡಿಕೇರಿ ಘಟಕದ ಸೆಬಾಸ್ಟಿಯನ್ ಚಾರ್ಲಿ, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್‍ನ ಉಪಾಧ್ಯಕ್ಷರಾದ ಜೊಕಿಂ ರಾಡ್ರಿಗಸ್, ಮೈಕಲ್ ಮಾರ್ಷಲ್, ರೋಸ್ ಮೇರಿ ರಾಡ್ರಿಗಸ್, ಸಂಘಟನಾ ಕಾರ್ಯದರ್ಶಿಗಳಾದ ಮರ್ವಿನ್ ಲೋಬೋ, ಅಂತೋಣಿ ಡಿಸೋಜಾ, ಯುವ ಘಟಕದ ಅಧ್ಯಕ್ಷ ಪ್ರಶಾಂತ್ ಲೋಬೋ (ಬಬ್ಲು), ಮಹಿಳಾ ಘಟಕದ ಅಧ್ಯಕ್ಷೆ ಜೆ.ಫಿಲೋಮಿನ, ಗಾಯನ ಸ್ಪರ್ಧೆಯ ಸಂಚಾಲಕ ಬ್ಲೇಜಿ ಕ್ರಾಸ್ತ ಪಾಲ್ಗೊಳ್ಳಲಿದ್ದಾರೆ.