ಮಡಿಕೇರಿ ನ.29 NEWS DESK : ಕೊಡಗಿನ ಸುಗ್ಗಿ ಹಬ್ಬ “ಪುತ್ತರಿ”ಯನ್ನು ಡಿ.14 ರಂದು ನಾಡಿನಾದ್ಯಂತ ಆಚರಿಸಲು ದಿನ ಮತ್ತು ಸಮಯವನ್ನು ಇಂದು ನಿಗದಿ ಪಡಿಸಲಾಯಿತು. ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ತಕ್ಕಮುಖ್ಯಸ್ಥರು, ಗ್ರಾಮಸ್ಥರು, ಭಕ್ತಾದಿಗಳ ಸಮ್ಮುಖದಲ್ಲಿ ಅಮ್ಮಂಗೇರಿ ಜ್ಯೋತಿಷ್ಯರು ಪುತ್ತರಿ ಹಬ್ಬದ ದಿನ, ಸಮಯ ಹಾಗೂ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಕಲಾಡ್ಚ ಹಬ್ಬದ ದಿನವನ್ನು ನಿಗದಿ ಪಡಿಸಿದರು. ಪುತ್ತರಿ ಹಬ್ಬದ ದಿನವಾದ ಡಿ.14 ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ರಾತ್ರಿ 7.30ಕ್ಕೆ ನೆರೆ ಕಟ್ಟುವುದು, 8.30ಕ್ಕೆ ಕದಿರು ತೆಗೆಯುವುದು ಮತ್ತು 9.30ಕ್ಕೆ ತೀರ್ಥ ಪ್ರಸಾದ ಸ್ವೀಕಾರವೆಂದು ಸಮಯ ನಿಗದಿ ಪಡಿಸಲಾಯಿತು. ನಾಡಿನಾದ್ಯಂತ ಜನರು ಅಂದು ರಾತ್ರಿ 7.50 ಕ್ಕೆ ನೆರೆ ಕಟ್ಟುವುದು, 8.50 ಕ್ಕೆ ಕದಿರು ತೆಗೆಯವುದು ಮತ್ತು 9.50ಕ್ಕೆ ಭೋಜನ ಮಾಡುವುದು.
::: ಕಲಾಡ್ಚ ಹಬ್ಬ ::: ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಕಲಾಡ್ಚ ಹಬ್ಬವನ್ನು ಪುತ್ತರಿ ಹಬ್ಬದ ಮುನ್ನಾ ದಿನವಾದ ಡಿ.13 ರಂದು ನಡೆಸಲು ದಿನವನ್ನು ನಿಗದಿ ಪಡಿಸಲಾಯಿತು.













