ಮಡಿಕೇರಿ ನ.29 NEWS DESK : ಯಾವುದೇ ಕಾರಣಕ್ಕೂ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ. ಅವಂದೂರು ಗ್ರಾಮದ ಗೋಪಾಲ ಕೃಷ್ಣ ದೇವಾಲಯದ ಕಾಮಗಾರಿಯನ್ನು ವೀಕ್ಷಿಸಿ ಗ್ರಾಮದ ಜನತೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾವು ನನಗೆ ಯಾವ ಗ್ರಾಮದಲ್ಲಿ ಮತ ಎಷ್ಟು ಬಂದಿದೆ ಎನ್ನುವುದಕ್ಕೆ ಆದ್ಯತೆ ನೀಡದೆ ಯಾವ ಗ್ರಾಮದಲ್ಲಿ ಏನು ಅಭಿವೃದ್ಧಿ ಆಗಬೇಕು ಎಂಬ ವಿಚಾರಕ್ಕೆ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು. ತಮ್ಮ ವೈಯುಕ್ತಿಕ ಬದುಕು ಮತ್ತು ಸಾರ್ವಜನಿಕ ಬದುಕು ಎರಡರಲ್ಲೂ ಜಾತಿ,ಮತ,ಪಕ್ಷ ಭೇದವನ್ನು ಹೊರತಾದ ಜೀವನವನ್ನು ನಡೆಸಿಕೊಂಡು ಮುಂದಕ್ಕೂ ಅದೇ ರೀತಿಯಲ್ಲಿ ನಡೆಯುತ್ತೇನೆ ಎಂದು ಹೇಳಿದರು.
ದೇವಸ್ಥಾನದ ಅಭಿವೃದ್ಧಿ ಗೆ ವೈಯುಕ್ತಿಕ ನೆರವು ನೀಡುವುದಾಗಿ ಭರವಸೆ ನೀಡಿದ ಪೊನ್ನಣ್ಣ ಅವರು ದೇವಾಲಯದ ಜಮೀನನ್ನು ದೇವಾಲಯದ ಸಮಿತಿ ಹೆಸರಿಗೆ ವರ್ಗಾಯಿಸಿದ ಮೇಲೆ ಸರ್ಕಾರದಿಂದ ದೊಡ್ಡ ಮೊತ್ತದ ನೆರವು ಕೊಡಿಸಲು ಬದ್ದನಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಬೇಡಿಕೆಗಳ ಮನವಿಯನ್ನು ಶಾಸಕರಿಗೆ ಸಲ್ಲಿಸಿದರು.ದೇವಸ್ಥಾನ ಸಮಿತಿಯ ಅಧ್ಯಕ್ಷರು, ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು, ಪ್ರಮುಖರಾದ ಕೊಲ್ಯದ ಗಿರೀಶ್, ಕೇಟೋಳಿ ಮೋಹನ್ ರಾಜ್, ತೆನ್ನಿರ ಮೈನಾ, ಕೊಡಗನ ತೀರ್ಥ ಪ್ರಸಾದ್, ನಾಪಂಡ ಗಣೇಶ್, ಹೊಸೂರು ಸೂರಜ್,
ಪಿ.ಎಲ್.ಸುರೇಶ್, ಕಾಳೆರಮ್ಮನ ಕುಮಾರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.