ನಾಪೋಕ್ಲು ಡಿ.12 NEWS DESK : ಮೈಸೂರು ಕೇರಳ ಸಮಾಜದಲ್ಲಿ ನ್ಯಾಷನಲ್ ಮುಬೀನ ಹಾಗೂ ಶಿಟೋರಿಯೋ ಅಸೋಸಿಯೇಷನ್ ವತಿಯಿಂದ ನಡೆದ ಮೂರನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ನಾಪೋಕ್ಲುವಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪದಕಗೆದ್ದು ಸಾಧನೆ ಮಾಡಿದ್ದಾರೆ. ಬೇತು ಗ್ರಾಮದ ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕುಟ್ಟಂಚೆಟ್ಟಿರ ಕೆ.ಪಿ. ಅಂಜನ್ ಹಾಗೂ ಕೇಲೇಟಿರ ಈತನ್ ಪೊನ್ನಣ್ಣ ಕರಾಟೆ ಕಟಾ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಬಿ.ಎಸ್.ದೈವಿಕ ಕುಮಿತೆ ವಿಭಾಗದಲ್ಲಿ ಬೆಳ್ಳಿ, ಕಟಾ ಕಂಚು ಪದಕ ಪಡೆದಿದ್ದಾರೆ. ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮಣವಟ್ಟಿರ ಲಚನ್ ಪೊನ್ನಣ್ಣ ಕಟಾ ಮತ್ತು ಕುಮಿತೆ ವಿಭಾಗದಲ್ಲಿ ಕಂಚು ಪಡೆದಿದ್ದಾರೆ. ಇವರಿಗೆ ಚೆಟ್ಟಿಯಾರಂಡ ದಿಲನ್ ತಿಮಯ್ಯ ಹಾಗೂ ಧೀರಜ್ ಕಾರ್ಯಪ್ಪ ಅವರು ತರಬೇತಿ ನೀಡಿದ್ದಾರೆ.
ವರದಿ : ದುಗ್ಗಳ ಸದಾನಂದ.