ಮಡಿಕೇರಿ NEWS DESK ಡಿ.16 : ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ಯುವ ಸಪ್ತಾಹದ ಅಂಗವಾಗಿ ಕೊಡಗು ಜಿಲ್ಲೆಯ ಯುವ ಜನರಿಗಾಗಿ “ಯುವ ಶಕ್ತಿ ಮತ್ತು ಭಾರತ” ಎಂಬ ವಿಷಯದ ಕುರಿತು ಜಿಲ್ಲಾ ಮಟ್ಟದ ಲೇಖನ ಸ್ಪರ್ಧೆ ನಡೆಯಲಿದೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು, ನೆಹರು ಯುವ ಕೇಂದ್ರ ಮಡಿಕೇರಿ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು 15ವರ್ಷ ಮೇಲ್ಪಟ್ಟು 30 ವರ್ಷದೊಳಗಿನವರಾಗಿರಬೇಕು, ಲೇಖನದೊಂದಿಗೆ ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಿರಬೇಕು. ಟೈಪ್ ಮಾಡಿದ ಲೇಖನ “ಎ4” ಕಾಗದದ ಒಂದೇ ಭಾಗದಲ್ಲಿರಬೇಕು ಮತ್ತು ನಾಲ್ಕು ಪುಟಗಳನ್ನು ಮೀರಬಾರದು. ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಜೇತರಿಗೆ ಆಕರ್ಷಕ ಟ್ರೋಫಿ, ನಗದು ಬಹುಮಾನ ಹಾಗೂ ದೃಢೀಕರಣ ಪತ್ರವನ್ನು ನೀಡಲಾಗುವುದು. ಚಿತ್ರಕಲೆ ಸ್ಪರ್ಧೆ :: 15 ವರ್ಷದೊಳಗಿನ ಮಕ್ಕಳಿಗೆ “ಸ್ವಾಮಿ ವಿವೇಕಾನಂದ”ರ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಚಿತ್ರವು “ಎ4” ಡ್ರಾಯಿಂಗ್ ಶಿಟ್‌ನಲ್ಲಿ ಬಿಡಿಸತಕ್ಕದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ದೃಢೀಕರಣ ಪತ್ರವನ್ನು ನೀಡಲಾಗುವುದು. ಚಿತ್ರಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಆಧಾರ್ ಕಾರ್ಡ್ ಪ್ರತಿಯನ್ನು ಡ್ರಾಯಿಂಗ್ ಶಿಟ್‌ನೊಂದಿಗೆ ಕಳುಹಿಸಿಕೊಡಬೇಕು. ಲೇಖನ ಹಾಗೂ ಚಿತ್ರಕಲೆಗಳನ್ನು ಜ.5 ರಂದು ಮಧ್ನಾಹ್ನ 3 ಗಂಟೆಯೊಳಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9481213920, 9845571290 ನ್ನು ಸಂಪರ್ಕಿಸಬಹುದಾಗಿದೆ. ಭಾಗವಹಿಸುವವರು ಪಾಸ್‌ಪೋರ್ಟ್ ಫೋಟೋವನ್ನು ಕಳುಹಿಸಿಕೊಡಬೇಕು. ಅಂಚೆ ಮೂಲಕ ಅಥವಾ ನೇರವಾಗಿ ಪಿ.ಪಿ.ಸುಕುಮಾರ್, ಅಧ್ಯಕ್ಷರು, ಜಿಲ್ಲಾ ಯುವ ಒಕ್ಕೂಟ, ಕೊಡಗು. C/O ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣದ ಸಮೀಪ, ಮಡಿಕೇರಿ, ಈ ವಿಳಾಸಕ್ಕೆ ತಲುಪಿಸುವಂತೆ ಸುಕುಮಾರ್ ತಿಳಿಸಿದ್ದಾರೆ. ಜ.12 ರಂದು ನಡೆಯುವ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ಯುವ ಸಪ್ತಾಹ ಕಾರ್ಯಕ್ರಮದ ಸಂದರ್ಭ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.
Breaking News
- *ಎಳ್ಳುಕೊಚ್ಚಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ 48ನೇ ದೀಪೋತ್ಸವ*
- *ಐವರು ಭಯೋತ್ಪಾದಕರನ್ನು ಸದೆಬಡಿದ ಸೇನೆ : ಇಬ್ಬರು ಯೋಧರಿಗೆ ಗಾಯ*
- *ಕುಶಾಲನಗರ ರೋಟರಿ ಸಂಸ್ಥೆಯಿಂದ ಗ್ರಂಥಾಲಯಕ್ಕೆ ಪೀಠೋಪಕರಣ ವಿತರಣೆ*
- *ಕೊಡಗಿನಲ್ಲಿ ಫುಟ್ಬಾಲ್ ಬೆಳವಣಿಗೆಗೆ ಕೈ ಜೋಡಿಸಿ : ಪಾಣತ್ತಲೆ ಜಗದೀಶ್ ಮಂದಪ್ಪ ಕರೆ*
- *ಡಿ.20ರಂದು ಮಡಿಕೇರಿಯಲ್ಲಿ ರೈತರ ಬೃಹತ್ ಪ್ರತಿಭಟನೆ*
- *ಆಯುಷ್ ಇಲಾಖೆಯಿಂದ ಜಿಲ್ಲೆಯಾದ್ಯಂತ ಪ್ರಕೃತಿ ಪರೀಕ್ಷಾ ಅಭಿಯಾನ*
- *ಗೋಣಿಕೊಪ್ಪಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶತಮಾನೋತ್ಸವದ ಸಂಭ್ರಮ : ಹಳೆಯ ವಿದ್ಯಾರ್ಥಿಗಳಿಂದ ಲೇಖನಗಳ ಆಹ್ವಾನ*
- *ವಿರಾಜಪೇಟೆ : ಮೃತದೇಹಗಳನ್ನು ಸುರಕ್ಷಿತವಾಗಿಡುವ ‘ಫ್ರೀಜರ್’ ಉದ್ಘಾಟನೆ*
- *ಹೃದಯಾಘಾತದಿಂದ 32 ವರ್ಷದ ಪೊಲೀಸ್ ಸಿಬ್ಬಂದಿ ಸಾವು*
- *ನಿಧನ ಸುದ್ದಿ*