ಸೋಮವಾರಪೇಟೆ ಡಿ.17 NEWS DESK : ಕೃಷಿ ಮಾಡುತ್ತಿರುವ ಸಿ ಆ್ಯಂಡ್ ಡಿ ಜಾಗಕ್ಕೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಡಿ.20ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿಸಿರುವ ರೈತರ ಅಹೋರಾತ್ರಿ ಪ್ರತಿಭಟನೆಗೆ ಪೂರ್ವಭಾವಿ ಸಭೆ ಒಕ್ಕಲಿಗರ ಸಮುದಾಯಭವನದಲ್ಲಿ ನಡೆಯಿತು. ತಾಲ್ಲೂಕಿನ ಗ್ರಾಮಗಳಿಂದ 65 ಬಸ್‍ಗಳಲ್ಲಿ ರೈತರು ಪ್ರತಿಭಟನೆಗೆ ತೆರಳಲಿದ್ದಾರೆ. ಬೆಳಿಗ್ಗೆ 8.30ಕ್ಕೆ ಕಕ್ಕೆಹೊಳೆ ಜಂಕ್ಷನ್‍ನಿಂದ ಎಲ್ಲಾ ಬಸ್‍ಗಳು ಹೊರಡಲಿದ್ದು, ಕುಶಾಲನಗರ , ಸುಂಠಿಕೊಪ್ಪ ಮಾರ್ಗವಾಗಿ 10.30ಕ್ಕೆ ಸುದರ್ಶನ ಸರ್ಕಲ್ ತಲುಪಲಿವೆ. ಅಲ್ಲಿಂದ ಮೆರವಣಿಗೆ ನಡೆಯಲಿದ್ದು ಗಾಂಧಿ ಮೈದಾನದಲ್ಲಿ ಧರಣಿ ನಡೆಯಲಿದೆ ಎಂದು ರೈತಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್ ಹೇಳಿದರು. ಹಾಲಿ, ಮಾಜಿ ಶಾಸಕರುಗಳು, ಸಂಸದರಿಗೆ ಆಹ್ವಾನ ನೀಡಲಾಗಿದೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗು ಸಿ.ಸಿ.ಎಫ್ ಅವರುಗಳು ಧರಣಿ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಬೇಕು ಎಂದು ಹೇಳಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ರೈತ ಮುಖಂಡರಾದ ಕೆ.ಎಂ.ದಿನೇಶ್, ಕೆ.ಎಂ.ಲೋಕೇಶ್, ಎಸ್.ಬಿ.ಭರತ್ ಕುಮಾರ್, ಬಗ್ಗನ ಅನಿಲ್, ನಂದಕುಮಾರ್, ಮಿಥುನ್ ಹಾನಗಲ್, ವಿ.ಎಂ.ವಿಜಯ, ಬಿ.ಜೆ.ದೀಪಕ್, ರಾಜಪ್ಪ, ದಿವಾಕರ್ ಕೂತಿ, ಚೌಡ್ಲು ಯೋಗೇಂದ್ರ ಹಾಗು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷರುಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.