ನಾಪೋಕ್ಲು ಡಿ.17 NEWS DESK : ನರಿಯಂದಡ ಗ್ರಾಮದ ಎಡಪಾಲಕೇರಿ ಅಯ್ಯಪ್ಪ ದೇವಾಲಯದ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯ, ಮಹಾಪೂಜೆ, ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಡೆಯಿತು. ಹಲವು ವ್ರತದಾರಿ ಅಯ್ಯಪ್ಪ ಭಕ್ತರು ದೇವರನ್ನು ಸ್ತುತಿಸಿ ಹಾಡಿ ತಮ್ಮ ಸೇವೆಯನ್ನು ನೆರವೇರಿಸಿದರು. ಭಕ್ತಾದಿಗಳು ವಿಶೇಷ ಹರಕೆ, ಸೇವೆಗಳನ್ನು ಸಮರ್ಪಿಸಿದರು. ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು. ಅಯ್ಯಪ್ಪ ದೇವಾಲಯದ ಅಧ್ಯಕ್ಷ ಬೆಳಿಯಂಡ್ರ ಹರಿಪ್ರಸಾದ್, ಕಾರ್ಯದರ್ಶಿ ಪೊಕ್ಕುಳಂಡ್ರ ಅಭಿಲಾಷ್, ಉಪಾಧ್ಯಕ್ಷ ಪೊಕ್ಕುಳಂಡ್ರ ಸೂರಜ್, ಗೌರವ ಅಧ್ಯಕ್ಷ ತೋಟಂಬೈಲ್ ಅನಂತ್ ಕುಮಾರ್, ಆಡಳಿತ ಮಂಡಳಿ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹಬ್ಬದ ಪ್ರಯುಕ್ತ ದೇವಾಲಯದ ಆವರಣ ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿತ್ತು.
ವರದಿ : ದುಗ್ಗಳ ಸದಾನಂದ.