ನಾಪೋಕ್ಲು ಡಿ.17 NEWS DESK : ಮೂರ್ನಾಡಿನ ಆಪ್ತಮಿತ್ರ ಬಳಗದ ವತಿಯಿಂದ ಫೆ.8 ರಂದು ಮೂರ್ನಾಡಿನಲ್ಲಿ ನಡೆಯುವ ಎರಡನೇ ವರ್ಷದ ಯಕ್ಷೋತ್ಸವದ ಪೂರ್ವಭಾವಿ ಸಭೆ ನಡೆಯಿತು. ಮೂರ್ನಾಡು ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಯ ಕುರಿತು ಚರ್ಚಿಸಲಾಯಿತು. ಅಂದು ಸಂಜೆ 6 ಗಂಟೆಯಿಂದ ರಾತ್ರಿ 1 ಗಂಟೆಯವರೆಗೆ ಹನುಮಗಿರಿ ಮೇಳದವರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ಗ್ರಾಮಸ್ಥರ ಸಹಕಾರ ಕೋರಲಾಯಿತು. ಈ ಸಂದರ್ಭ ಆಪ್ತಮಿತ್ರ ಬಳಗದ ಸದಸ್ಯರುಗಳಾದ ಕುಶನ್ ರೈ, ವಿಶ್ವನಾಥ್, ಜಯಂತ್, ಪುರುಷೋತ್ತಮ್, ಗಿರೀಶ್ ರೈ, ಚಿನ್ನು, ಅಶ್ವತ್ ರೈ, ಚಂದನ್, ಪುರುಷೋತ್ತಮ್ ಕುಲಾಲ್, ಸಜೀವ, ಮೋಹನ್, ಜಿತಿನ್, ವಿನಯ್, ಚಂದ್ರಶೇಖರ್ ಹೊದ್ದೂರು, ಚಂದ್ರಶೇಖರ್ ಕುಲಾಲ್, ತನ್ಮಯ್, ಧ್ಯಾನಿಕ್, ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.