ಚೆಟ್ಟಳ್ಳಿ ಡಿ.17 NEWS DESK : ಪುತ್ತರಿ ನಮ್ಮೆಯ ಪ್ರಯುಕ್ತ ಚೆಟ್ಟಳ್ಳಿಯ ಶ್ರೀಮಂಗಲ ಶ್ರೀ ಭಗವತಿ ದೇವಾಲಯದಲ್ಲಿ ಊರಿನ ಹಿರಿಯರು ದುಡಿಕೊಟ್ಟ್ ಪಾಟ್ ನೆರವೇರಿಸಿದರು. ಪುರಾತನ ಸಂಪ್ರದಾಯದಂತೆ ಪುತ್ತರಿ ಪೌವುದ್ ನಡೆದ ಮಾರನೆಯ ದಿನ ಜೋಯಿ ಚೂಳೆ, ಮನೆ ಪಾಟ್ ನಡೆಯುತ್ತದೆ. ಊರಿನ ಭಗವತಿ ದೇವಿಯನ್ನು ಹಾಡುವ ಸಂಪ್ರದಾಯದಂತೆ ಈ ಬಾರಿಯೂ ಸಂಜೆ ಊರಿನ ಹಿರಿಯರು ಸೇರಿ ಸಂಪ್ರದಾಯವನ್ನು ನಡೆಸಿದರು. ನಂತರ ಪ್ರಸಾದ ವಿತರಣೆ ನೆರವೇರಿತು.