ಮಡಿಕೇರಿ ಡಿ.17 NEWS DESK : ವಿರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ನಡೆದ ಕಾವೇರಿ ಕಾರ್ನಿವಲ್-2024 ಕಾರ್ಯಕ್ರಮದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆಯಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಿಸಿ ಚಾಂಪಿಯನ್‍ಶಿಪ್‍ನ್ನು ತನ್ನದಾಗಿಸಿಕೊಂಡಿದೆ.
ಜಾನಪದಗೀತೆ ಸ್ಪರ್ಧೆಯಲ್ಲಿ ಟಿ.ಎಮ್.ಆಶ್ರಯ್ ಅಕ್ಕಮ್ಮ (10ನೇ), ಜಶ್ವಂತ್ ಬೋಪಣ್ಣ (10ನೇ), ಪಿ.ಜಿ.ಸಾಹಿತ್ಯ (8ನೇ), ಎಂ.ಡಿ.ಜೀವನ್ಯ (8ನೇ) ಎ.ಹನಿಯಾ (8ನೇ), ಎನ್.ಎನ್.ಪೊನ್ನಮ್ಮ (8ನೇ) ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಬಹುಮಾನ ಪಡೆದುಕೊಂಡರು. ಬಾಲಕಿಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಎಂ.ಶಿಪ್ರಾಕಾಳಪ್ಪ (10ನೇ), ಪಿ.ಪಿ.ಕ್ಷಮಾ ಕಾವೇರಮ್ಮ (10ನೇ), ಜಿ.ಬಿ.ಸ್ಪೂರ್ತಿ ಪೂವಮ್ಮ (10ನೇ), ಎಸ್.ಪುಷ್ಪಿತಾವಿ (10ನೇ) ಕೆ.ಎಸ್.ಆವಂದಿ (10ನೇ) ಎಸ್.ಎಸ್.ರಶ್ಮಿ ಪೊನ್ನಮ್ಮ (9ನೇ) ಬಿ.ಎಸ್.ತನ್ಯಾರೈ (9ನೇ) ಪೂರ್ವಿಕ ಪೂವಮ್ಮ(9ನೇ) ಪ್ರಥಮ ಬಹುಮಾನ ಪಡೆದುಕೊಂಡರು. ರೆಟ್ರೋಡ್ಯಾನ್ಸ್ ಸ್ಪರ್ಧೆಯಲ್ಲಿ ಶಕ್ತಿದೇಚಮ್ಮ (10ನೇ), ಸಾಂಚ್ ಬೋಪಣ್ಣ (10ನೇ), ತಾನಿಯಾ ಅಯ್ಯಪ್ಪ (10ನೇ), ಎಸ್.ಎಂ.ಹನಾಫಲಕ್ (9ನೇ) ಐ.ಹೈಜಾûಬಿ. (9ನೇ) ಸುಹಾನಿರಾಜ್ಪುರೋಹಿತ್ (9ನೇ), ದೀಪ್ತಿ ತಂಗಮ್ಮ(9ನೇ), ಬಿ.ಹನ್ಸಿಕಾ ಪೊನ್ನಪ್ಪ (8ನೇ) ವಿದ್ಯಾರ್ಥಿನಿಯರು ಪಾಲ್ಗೊಂಡು ದ್ವಿತೀಯ ಬಹುಮಾನ ಪಡೆದುಕೊಂಡರು. ವಿಜ್ಞಾನಮಾದರಿ ಸ್ಪರ್ಧೆಯಲ್ಲಿ ಬಿ.ಎಸ್.ಸೃಷ್ಟಿ (9ನೇ), ತರುಣ್ (9ನೇ) ಸಿ.ಕಾಜಲ್ಪಿ (9ನೇ), ಕೆ.ಎಂ.ಯಶ್ಮೀತಾ (9ನೇ) ವಿದ್ಯಾರ್ಥಿಗಳು ಭಾಗವಹಿಸಿ ತೃತೀಯ ಬಹುಮಾನ ಪಡೆದುಕೊಂಡರು. ಹಾಕಿ ಪಂದ್ಯಾವಳಿಯಲ್ಲಿ ಕೆ.ಕೆ.ದಿಶಾನ್ (10ನೇ), ಕೆ.ಎಸ್.ಅಯ್ಯಪ್ಪ (10ನೇ), ಪಿ.ಎಸ್.ದೇವಯ್ಯ (10ನೇ) ವೃಶಾಂಕ್ ದೇವಯ್ಯ(9ನೇ) ತನ್ಮಯ್ಕಾಳಪ್ಪ (8ನೇ), ವಿಭಿನ್ ಸುಬ್ಬಯ್ಯ (8ನೇ), ಎನ್.ಬಿ.ಅಯ್ಯಪ್ಪ (8ನೇ), ಕೆ.ಜಿ.ಮುತ್ತಣ್ಣ (8ನೇ) ಈ ವಿದ್ಯಾರ್ಥಿಗಳು ಭಾಗವಹಿಸಿ ತೃತೀಯ ಬಹುಮಾನ ಪಡೆದುಕೊಂಡರು. ಈ ಮೂಲಕ ಹಲವು ಬಹುಮಾನಗಳನ್ನು ಮುಡಿಗೇರಿಸಿಕೊಂಡು ಕಾವೇರಿ ಶಾಲೆ ಓವರ್ ಆಲ್ ಚಾಂಪಿಯನ್‍ಶಿಪ್ ಆಗಿ ಹೊರಹೊಮ್ಮಿತು. ಶಾಲಾ ಸಂಯೋಜಕಿ ಅಮೃತ ಅರ್ಜುನ್ ಮತ್ತು ತರಬೇತಿ ನೀಡಿದ ಶಿಕ್ಷಕರುಗಳಾದ ಸುಪ್ರೀತ, ಸುರಯ್ಯ, ಲೀನಾ, ಮೋನಿಕಾ, ಲಾವಣ್ಯ ಹಾಜರಿದ್ದರು. ಇವರಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಎಸ್.ಸುದೇಶ್, ಕಾರ್ಯದರ್ಶಿಗಳಾದ ಪಿ.ಎನ್.ವಿನೋದ್ ಮತ್ತು ಫ್ರೌಡಶಾಲಾ ಮುಖ್ಯ ಶಿಕ್ಷಕಿ ಬಿ.ಎಸ್.ಜ್ಯೋತಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪಿ.ಯು.ಪಾರ್ವತಿ ಮತ್ತು ಶಿಕ್ಷಕ ವೃಂದದವರು, ಪೋಷಕರು ಅಭಿನಂದಿಸಿದರು.