ಸುಂಟಿಕೊಪ್ಪ ಡಿ.18 NEWS DESK : ಮಾದಾಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಎಂ.ಜಿ.ಸೋಮಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾದಾಪುರ ಗ್ರಾ.ಪಂ ಅಧ್ಯಕ್ಷರಾಗಿದ್ದ ಮನುಬಿದ್ದಪ್ಪ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನವು ಸಾಮಾನ್ಯ ಪುರುಷರ ಮೀಸಲಾತಿ ನಿಗದಿಯಾಗಿದ್ದು, ಮರುವಂಡ ಜಾಲಿ ಸೋಮಣ್ಣ ಹಾಗೂ ಕೆ.ಎ.ಲತೀಫ್ ನಾಮಪತ್ರ ಸಲ್ಲಿಸಿದರು. ಕೊನೆಯ ಹಂತದಲ್ಲಿ ಕೆ.ಎ.ಲತೀಫ್ ನಾಮಪತ್ರ ಹಿಂಪಡೆದಿದ್ದರಿಂದ ಚುನಾವಣಾ ಅಧಿಕಾರಿಯಾಗಿದ್ದ ಸೋಮವಾರಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಎಂ.ಜಿ.ಸೋಮಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿದರು. ಮಾದಾಪುರ ಗ್ರಾ.ಪಂ.ಉಪಾಧ್ಯಕ್ಷ ಸುರೇಶಭಾವೆ, ಸದಸ್ಯರುಗಳಾದ ಕೆ.ಎ.ಲತೀಪ್, ಮನುಬಿದ್ದಪ್ಪ, ನಿರೂಪ, ಪಿ.ಡಿ.ಅಂತೋಣಿ(ತಂಗಚ್ಚ), ಮಾನಸ, ದಮಯಂತಿ, ಕೆ.ಸಿಶೀಲ, ಗಿರೀಶ, ಜೆರ್ಮಿ, ಭಾಗಿರಥಿ ಹಾಗೂ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನ, ಕಾರ್ಯದರ್ಶಿ ಅನಿತಾ, ಸಿಬ್ಬಂದಿಗಳಾದ ರವಿ, ಪ್ರೀತಿ ಉಪಸ್ಥಿತರಿದ್ದರು.