ಮಡಿಕೇರಿ ಡಿ.18 NEWS DESK : ಹಲವಾರು ವರ್ಷಗಳಿಂದ ಹಾಕತ್ತೂರು ಗ್ರಾಮಸ್ಥರ ಬೇಡಿಕೆಯಾಗಿದ್ದ ಶಾಲಾ ಆಟದ ಮೈದಾನದ ಅಗಲೀಕರಣ ಕಾರ್ಯವು ಆರಂಭಗೊಂಡಿದ್ದು, ಶಾಸಕ ಎ.ಎಸ್.ಪೊನ್ನಣ್ಣ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಕತ್ತೂರು ಮೈದಾನದಲ್ಲಿ ನಡೆದ ಹಾಕತ್ತೂರು ಪ್ರೀಮಿಯರ್ ಲೀಗ್ ನ ವೇದಿಕೆಯಲ್ಲಿ ಮೈದಾನದ ಅಭಿವೃದ್ಧಿಗಾಗಿ ಅನುದಾನ ನೀಡುವ ಆಶ್ವಾಸನೆ ನೀಡಿದ್ದ ಶಾಸಕರು ನುಡಿದಂತೆ ನಡೆದು ಹಾಕತ್ತೂರು ಮೈದಾನದ ಕಾಮಗಾರಿಗೆ 20 ಲಕ್ಷ ಅನುದಾನ ನೀಡಿ ಕೆಲಸ ಕಾರ್ಯಗಳು ಇದೀಗ ಆರಂಭಗೊಂಡಿದೆ. ಗ್ರಾಮಸ್ಥರು ನುಡಿದಂತೆ ನಡೆದ ಶಾಸಕರಿಗೆ ಧನ್ಯವಾದ ತಿಳಿಸಿದ್ದಾರೆ.