ಗುಂಡ್ಲುಪೇಟೆ NEWS DESK ಡಿ.22 : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅಭಯಾರಣ್ಯದ ಕುಂದುಕೆರೆ ವಲಯದ ಯಲಚೆಟ್ಟಿ ಶಾಖೆಯ ಕುಂದುಕೆರೆ ಗಸ್ತಿನ ಸಿದ್ದರಾಮನಕಟ್ಟೆ ಹಳ್ಳದ ಅರಣ್ಯ ಪ್ರದೇಶದಲ್ಲಿ ಸುಮಾರು 30-35 ವರ್ಷದ ಗಂಡಾನೆಯೊಂದರ ಕಳೇಬರ ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಡಾನೆಯ ದೇಹದಲ್ಲಿ ಗಾಯದ ಗುರುತುಗಳು ಕಂಡುಬಂದಿದೆ. ಆನೆಗಳ ಕಾದಾಟದಿಂದ ಗಾಯಗೊಂಡು ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ತಿಳಿಸಿದ್ದಾರೆ. ಆನೆಯ 2 ದಂತಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.