ಕುಶಾಲನಗರ ಡಿ.23 NEWS DESK : ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿರೂಪಾಕ್ಷಪುರ ಗ್ರಾಮ ಅರಣ್ಯ ಸಮಿತಿಗೆ ನೂತನವಾಗಿ ಪದಾಧಿಕಾರಗಳನ್ನು ನೇಮಕ ಮಾಡಲಾಗಿದ್ದು, ಈ ಸಂಬಂಧ ಗ್ರಾಮದ ಹೆಬ್ಬಾಗಿಲಿನಲ್ಲಿ ಅರಣ್ಯ ಸಮಿತಿ ನಾಮಫಲಕವನ್ನು ಗಿರಿಜನ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಕೆ.ಚಂದ್ರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಗಿರಿಜನ ನಿವಾಸಿಗಳೂ ಸೇರಿದಂತೆ ಇತರೇ ನಿವಾಸಿಗಳಿಗೆ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಗ್ರಾಮದ ನಿವಾಸಿಗಳು ಸಂಘಟಿತರಾಗಿ ಹೋರಾಟ ನಡೆಸುವ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಗ್ರಾಮ ಅರಣ್ಯ ಸಮಿತಿ ರಚಿಸಲಾಗಿದೆ ಎಂದರು. ಈ ಸಂದರ್ಭ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಹೆಚ್.ಕೆ.ಗಿರೀಶ, ಉಪಾಧ್ಯಕ್ಷೆ ಹೆಚ್.ಕೆ.ಗಿರಿಜ, ಕಾರ್ಯದರ್ಶಿ ಕೆ.ಟಿ.ಕೇಶವ, ಗ್ರಾಮದ ಯಜಮಾನ ಪಿ.ಹೆಚ್.ದೇವರಾಜು, ಸದಸ್ಯರುಗಳಾದ ಬಿ.ಟಿ.ಪೊನ್ನಪ್ಪ, ಸಿ.ಆರ್.ಪದ್ಮಾವತಿ, ಎನ್.ಶೀಬಾ, ಹೆಚ್.ಟಿ.ಜಯ, ಎಂ.ಎ.ಬಶೀರ್, ಕೆ.ಎಸ್.ಮಣಿ, ಕೆ.ಎಂ.ಅಬ್ಬಾಸ್, ಹೆಚ್.ಎಸ್.ಶಾರದಾ, ಕೆ.ಜಿ.ಮಂಜುನಾಥ ಸೇರಿದಂತೆ ಮತ್ತಿತರ ಪ್ರಮುಖರು ಹಾಜರಿದ್ದರು.