ಮಡಿಕೇರಿ ಡಿ.26 NEWS DESK : ಪಾಲಿಬೆಟ್ಟದ ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ ವಿಶೇಷ ಶಾಲೆಯಲ್ಲಿ “ವಿಶ್ವ ಧ್ಯಾನ ದಿನಾಚರಣೆ”ಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಶಿವರಾಜ್ ಧ್ಯಾನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಧ್ಯಾನ ಮಾಡಿಸಿದರು. ಸ್ವಯಂ ಸೇವಕರಾದ ಲೀನಾ ಮಂದಣ್ಣ, ಬ್ರೈಟ್ ಬಿಗಿನಿಂಗ್ ಪ್ರಿಸ್ಕೂಲ್ ನ ಮುಖ್ಯ ಶಿಕ್ಷಕರಾದ ಸೋನಿಯಾ ಜೋಸೆಫ್, ಪಾಲಿಬೆಟ್ಟದ ಲೂಡ್ಸ್ ಹಿಲ್ ಕಾನ್ವೆಂಟ್ ಶಿಕ್ಷಕರಾದ ಪವಿತ್ರ, ನರ್ಸರಿ ಶಿಕ್ಷಕರ ತರಬೇತಿಯ ಪ್ರಶಿಕ್ಷಣಾರ್ಥಿಗಳು, ವಿಶೇಷ ಚೇತನ ವಿದ್ಯಾರ್ಥಿಗಳು, ಲೂಡ್ಸ್ ಕಾನ್ವೆಂಟ್ ವಿದ್ಯಾರ್ಥಿಗಳು, ಚೆಶೈರ್ ಹೋಮ್ ನ ಸಿಬ್ಬಂದಿ ವರ್ಗದವರು, ಸ್ಥಳೀಯರು ಭಾಗವಹಿಸಿದ್ದರು.