ಮಡಿಕೇರಿ ಡಿ.26
NEWS DESK : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ಜಾತ್ರೋತ್ಸವದ ಪ್ರಯುಕ್ತ ಇಂದು ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ದೇವಾಲಯದಲ್ಲಿರುವ ಬಸವನಿಗೆ ಬೆಳ್ಳಿ ಕವನವನ್ನು ಅರ್ಪಿಸಲಾಯಿತು. ಡಿ.25 ರಂದು ಮುಂಜಾನೆ ನೈರ್ಮಾಲ್ಯ ಬಲಿ (ಇರುಬೆಳಕು), ಮಧ್ಯಾಹ್ನ ಧ್ವಜಸ್ತಂಭ ಪೂಜೆ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ನಡೆಯಿತು. ಸಂಜೆ ಶ್ರೀ ಭೂತಬಲಿ (ತೂಚಂಬಲಿ), ಧ್ವಜಸ್ತಂಭ ಪೂಜೆ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ನೆರವೇರಿತು. ಇಂದು ಮುಂಜಾನೆ ನೈರ್ಮಾಲ್ಯ ಬಲಿ (ಇರುಬೆಳಕು), ತುಲಾಭಾರ ಸೇವೆ, ಮಧ್ಯಾಹ್ನ ಧ್ವಜಸ್ತಂಭ ಪೂಜೆ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ನೆರವೇರಿತು. ವಿವಿಧ ಗ್ರಾಮಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಪ್ರತಿದಿನವೂ ಮಧ್ಯಾಹ್ನ ಹಾಗೂ ರಾತ್ರಿ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಇಂದು ಸಂಜೆ 5 ಗಂಟೆಗೆ ನೃತ್ಯ ಬಲಿ (ನೆರಪು), 6 ಗಂಟೆಗೆ ವಸಂತಪೂಜೆ, 7.45ಕ್ಕೆ ಧ್ವಜಸ್ತಂಭ ಪೂಜೆ, ರಾತ್ರಿ 8 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 8.45ಕ್ಕೆ ದೇವರ ಶಯನೋತ್ಸವ, 9 ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ. ಡಿ.27 ರಂದು ಬೆಳಿಗ್ಗೆ 7.30 ಗಂಟೆಗೆ ಕವಾಟ ಪೂಜೆ, 10.30 ಗಂಟೆಗೆ ತೈಲಾಭ್ಯಂಜನ, ಪಂಚಾಮೃತ ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ಧ್ವಜಸ್ತಂಭ ಪೂಜೆ, 12.15 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ದೇವರ ಜಳಕಕ್ಕೆ ಹೊರಡುವುದು (ನಂದಿಪಾರೆ ಕಾವೇರಿಯಲ್ಲಿ), 6 ಗಂಟೆಗೆ ದೇವಾಲಯದ ಹೊರಾಂಗಣದಲ್ಲಿ ದೇವರ ನೃತ್ಯಬಲಿ, ನಡೆಭಂಡಾರ, 7.30 ಗಂಟೆಗೆ ಧ್ವಜಾವರೋಹಣ, ರಾತ್ರಿ 8.30 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 9 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.