ಮಡಿಕೇರಿ ಡಿ.26 NEWS DESK : ಪಾಲೂರು ಗ್ರಾಮದ ವಾರ್ಷಿಕ ಊರೊರ್ಮೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ‘ಪಾಲೂರ್ ಕೊಡವಾಮೆ ಕೂಟ’ ಏರ್ಪಡಿಸಿದ್ದ 19ನೇ ವರ್ಷದ ಕಾರ್ಯಕ್ರಮದಲ್ಲಿ ಪಾಲೂರಿನಲ್ಲಿ ನೆಲೆಸಿರುವ ಮಂದನೆರವಂಡ, ನೆರವಂಡ, ಚೆರುವಾಳಂಡ, ಮೇಪಾಡಂಡ, ಪೊದುವಡ, ಪೈಕೇರ, ಬೊಳ್ಳಿಯಂಡ, ಬಲ್ಲಂಡ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಪಾಡಂಡ ವೇಣು ಉತ್ತಪ್ಪ, ಕೊಡವ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮುಂದಿನ ಯುವ ಪೀಳಿಗೆಗೆ ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸಸ್ಯತಳಿ ಸಂರಕ್ಷಕ ನಾಪಂಡ ಪೂಣಚ್ಚ ನಾಣಿಯಪ್ಪ, ಕೊಡಗಿನ ಕಾಡು ಹಣ್ಣು, ಕರಿಮೆಣಸು ಮತ್ತು ಗಂಡು ರೆಕ್ಕೆಯಿಂದ ಕಾಫಿ ಗಿಡ ಉತ್ಪತ್ತಿ ಮಾಡುವ ಬಗ್ಗೆ ಮಾಹಿತಿ ನೀಡಿದರು.
::: ಸನ್ಮಾನ :::
ಕಾರ್ಯಕ್ರಮದಲ್ಲಿ ಸಸ್ಯತಳಿ ಸಂರಕ್ಷಕ ನಾಪಂಡ ಪೂಣಚ್ಚ ನಾಣಿಯಪ್ಪ, ಮಾಜಿ ಸೈನಿಕ ಹಾಗೂ ಗ್ರಾಮದ ಕಾಫಿಬೆಳೆಗಾರ ಚೆರುವಾಳಂಡ ರವೀಂದ್ರ, ನಿವೃತ್ತ ಶಿಕ್ಷಕಿ ಮಂದನೆರವಂಡ ವಾಣಿ ಸೋಮಣ್ಣ, ಸಿಎಪಿಎಫ್(ಸಿಎಸ್‍ಎಫ್)ನಲ್ಲಿ ಸೇವೆ ಸಲ್ಲಿಸುತ್ತಿರುವ, ರಾಷ್ಟ್ರಪತಿ ಪದಕ ವಿಜೇತ ನೆರವಂಡ ಸಾಯಿ ಸುಬ್ಬಯ್ಯ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಸದಸ್ಯರಿಗಾಗಿ ಹಲವು ಮನೋರಂಜನಾ ಸ್ಪರ್ಧೆ (ಕಳಿಕೂಟ) ಮತ್ತು ವಾಲಗ ನೃತ್ಯ ಸ್ಪರ್ಧೆಗಳು ಸಂಭ್ರಮದಿಂದ ನಡೆಯಿತು. ಇದೇ ಸಂದರ್ಭ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಪಾಲೂರು ಕೊಡವಾಮೆ ಕೂಟದ ಉಪಾಧ್ಯಕ್ಷರಾದ ನೆರವಂಡ ಚೆಸ್ಲಿ ದೇವಯ್ಯ, ಪೊದುವಡ ಜಯ ಪೊನ್ನಪ್ಪ, ಸದಸ್ಯರಾದ ಮಂದನೆರವಂಡ ಲೋಕೇಶ್ ಅಯ್ಯಪ್ಪ, ಮಂದನೆರವಂಡ ಬೋಪಣ್ಣ ದಿನೇಶ್, ಮೇಪಾಡಂಡ ಸುಗುಣ, ಪೈಕೇರ ನಂದ ಉತ್ತಪ್ಪ, ನೆರವಂಡ ಸಭಿ ಗಣಪತಿ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಮಂದನೆರವಂಡ ಸಂಜು ಅಚ್ಚಯ್ಯ ಕೂಟದ ಕಳೆದ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಚೆರುವಾಳಂಡ ದಿವಿಜ ಬೊಳ್ಳಮ್ಮ ಹಾಗೂ ನೆರವಂಡ ಶ್ವೇತ ದೇವಯ್ಯ ಅವರು ಅತಿಥಿಗಳು ಮತ್ತು ಸನ್ಮಾನಿತರ ಪರಿಚಯವನ್ನು ಮಾಡಿದರು.