ಮಡಿಕೇರಿ ಡಿ.27 NEWS DESK : ಓವರ್ ಲ್ಯಾಂಡರ್ ಅಸೋಸಿಯೇಷನ್ ವತಿಯಿಂದ ಡಿ.29 ರಂದು ಬೆಳಗ್ಗೆ 9 ಗಂಟೆಯಿಂದ ಸುಂಟಿಕೊಪ್ಪ ಬಳಿಯ ಕಾನ್‍ಬೈಲು ಗ್ರಾಮದಲ್ಲಿ ಆರೋಗ್ಯ ಉಚಿತ ಚಿಕಿತ್ಸಾ ಶಿಬಿರ ನಡೆಯಲಿದೆ. ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತ ತಜ್ಞ ವೈದ್ಯರು ಈ ಶಿಬಿರದಲ್ಲಿ ಪಾಲ್ಗೊಂಡು ರೋಗಿಗಳ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಚಿಕಿತ್ಸೆ ನೀಡಲಿದ್ದಾರೆ. ಸಾಮಾಜಿಕ ಹೊಣೆಯುಳ್ಳ ಸಂಸ್ಥೆಯಾಗಿರುವ ಓವರ್ ಲ್ಯಾಂಡರ್ ಅಸೋಸಿಯೇಷನ್‍ನ ಈ ಆರೋಗ್ಯ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ, ಹೆಚ್ಚಿನ ಮಾಹಿತಿಗೆ ಕಾರ್ಸನ್ ಕಾರ್ಯಪ್ಪ 9448380234 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸದೆ.