ನಾಪೋಕ್ಲು ಡಿ.27 NEWS DESK : ಮೈಸೂರು ಕೊಡಗು ಗೌಡ ಸಮಾಜದ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರಿನ ವಕೀಲರು ಹಾಗೂ ಪತ್ರಿಕಾ ಪ್ರತಿನಿಧಿ ಜವರೇ ಗೌಡರು ಕ್ಯಾಲೆಂಡರ್ ಬಿಡುಗಡೆ ಮಾಡಿ ಸಮಾಜ ಕೈಗೊಂಡಿರುವ ಉತ್ತಮ ಕಾರ್ಯಕ್ರಮದ ಜೊತೆಗೆ ಕ್ಯಾಲೆಂಡರ್ ಕೂಡ ಮಾಡಿರುವುದು ಸಂತೋಷದಾಯಕ ಎಂದರು. ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷ ಕುದುಪಜೆ ಚಂದ್ರಶೇಖರ್, ಕಾರ್ಯದರ್ಶಿ ಪೊನ್ನೇಟಿ ನಂದ, ಖಜಾಂಚಿ ನಡುಬೆಟ್ಟಿ ಲಕ್ಷ್ಮಣ, ನಿರ್ದೇಶಕರಾದ ಪಟ್ಟಡ ಶಿವಕುಮಾರ್, ಪಾಣತ್ತಲೆ ವಸಂತ, ಹೊಸೂರು ರಾಘವಯ್ಯ, ಕುಂಟುಪುಣಿ ರಮೇಶ್, ಕುಂಟುಪುಣಿ ಶೀಲಾ, ತೋಂಟಬೈಲು ಇಂದಿರಾ, ವ್ಯವಸ್ಥಾಪಕ ದಾಯನ ನಾಮಧೆಯ, ಮಾಜಿ ಸೈನಿಕ ಸಂಘದ ಅಧ್ಯಕ್ಷ ಚಂಡಿರ ಬಸಪ್ಪ, ಗೌಡ ಮಹಿಳಾ ಸಂಘದ ಅಧ್ಯಕ್ಷ ನಡುಬೆಟ್ಟು ಗೀತಾ ಲಕ್ಷ್ಮಣ, ಗೌಡ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪೊನ್ನಚ್ಚನ ಅಪ್ಪಯ್ಯ ಮೊದಲಾದವರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.